Home Uncategorized ಪತ್ನಿ ಮಗುವನ್ನು ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ಪತಿ

ಪತ್ನಿ ಮಗುವನ್ನು ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ಪತಿ

0
ಪತ್ನಿ ಮಗುವನ್ನು ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ಪತಿ

ಕಿನ್ನಿಗೋಳಿ: ಪತ್ನಿ ಮಗುವನ್ನು ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿದ ಘಟನೆ ಮೂಲ್ಕಿ ಸಮೀಪದ ಪಕ್ಷಿಕೆರೆಯಲ್ಲಿ ನಡೆದಿದೆ.

ಹತ್ಯೆಗೈದಾತನನ್ನು ಕಾರ್ತಿಕ್ ಭಟ್ (32) ಹಾಗೂ ಮೃತರನ್ನು ಪ್ರಿಯಾಂಕ ((28) ಹೃದಯ್ (4) ಎಂದು ಗುರುತಿಸಲಾಗಿದೆ.

ಆರೋಪಿ ಕಾರ್ತಿಕ್ ಮೊದಲಿಗೆ ಪಕ್ಷಿಕೆರೆಯಲ್ಲಿರುವ ತನ್ನ ಮನೆಯಲ್ಲಿ ಪತ್ನಿ ಮತ್ತು ಮಗುವನ್ನು ಹತ್ಯೆಗೈದ ಬಳಿಕ ಮೂಲ್ಕಿಯ ಬೆಳಾಯರು ನಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಯುವಕ ರೈಲಿಗೆ ತಲೆಕೊಟ್ಟು ಅತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ತನಿಖೆ ನಡೆಸುವಾಗ ಆತ್ಮಹತ್ಯೆ ಮಾಡಿಕೊಂಡವನು ಪಕ್ಷಿಕೆರೆಯ ಕಾರ್ತಿಕ್ ಭಟ್ ಎಂದು ತಿಳಿದಿದ್ದು ಮನೆಗೆ ಬಂದಾಗ ಪತ್ನಿ ಮಗು ಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದು, ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.

 

LEAVE A REPLY

Please enter your comment!
Please enter your name here