
ಉಡುಪಿ: ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್‌ನ ಶಾಖೆಯಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ ಎಂದು ಬ್ಯಾಂಕ್‌ನ ಅಧ್ಯಕ್ಷ, ಶಾಸಕ ಯಶ್‌ಪಾಲ್ ಸುವರ್ಣ ತಿಳಿಸಿದರು.
ನಗರದಲ್ಲಿ ಮಾತನಾಡಿದ ಅವರು, ಸಾಲ ಪಡೆದ ಕೆಲವರು ಸುಸ್ತಿದಾರರಾಗಿದ್ದು, ಸಾಲ ಮರುಪಾವತಿಸದೇ ಬ್ಯಾಂಕ್‌ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ಆರ್‌ಬಿಐ ನಿಯಮಾವಳಿ, ನಿರ್ದೇಶನದಂತೆಯೇ ಕಾರ್ಯನಿರ್ವಹಿಸುತ್ತಿದೆ.
ಸಾಲ ಮರುಪಾವತಿಸದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಹಕಾರಿ ಅಧಿನಿಯಮಗಳಂತೆ ಕೆಲವರ ಆಸ್ತಿ ಮುಟ್ಟುಗೋಲು ನೋಟಿಸ್ ಕೂಡ ಹೋಗಿದೆ ಎಂದರು.
ಮಹಾಲಕ್ಷ್ಮೀ ಕೋ-ಆಪ್ ಬ್ಯಾಂಕ್‌ನ ಎಲ್ಲ ಲೆಕ್ಕಾಚಾರಗಳು ಸ್ಪಷ್ಟವಾಗಿವೆ. ಸಾಲ ಪಡೆದವರು ಯಾವುದೇ ಸಮಸ್ಯೆ ಇದ್ದರೆ ಬ್ಯಾಂಕ್‌ನ ಮಹಾಸಭೆ ಅಥವಾ ನಿರ್ದಿಷ್ಟ ವೇದಿಕೆಯಲ್ಲಿ ಪ್ರಶ್ನೆ ಮಾಡಲು ಅವಕಾಶ ಇತ್ತು. ನ್ಯಾಯಾಲಯದಲ್ಲೂ ಹೋರಾಟ ಮಾಡಬಹುದಿತ್ತು ಎಂದರು.
ಸುಸ್ತಿದಾರರು ಬ್ಯಾಂಕ್‌ನಿಂದ ಸಾಲ ಪಡೆದಿರುವುದಕ್ಕೆ ಎಲ್ಲ ದಾಖಲೆಗಳೂ ಇವೆ. ಯಾರೋ ಹೇಳಿದರು ಎಂದ ಮಾತ್ರಕ್ಕೆ ಕೈಯಲ್ಲಿ ಹಣ ನೀಡಿ ಸಾಲ ಕೊಡುತ್ತಿದ್ದೇವೆ ಎನ್ನುವುದನ್ನು ನಂಬಲು ಸಾಧ್ಯವೇ? ಬ್ಯಾಂಕ್ ಎಲ್ಲ ರೀತಿಯ ತನಿಖೆ ಹಾಗೂ ನ್ಯಾಯಾಂಗ ಹೋರಾಟಕ್ಕೂ ಸಿದ್ಧವಿದೆ ಎಂದು ಹೇಳಿದರು.
