
ಸಿದ್ದಾಪುರ: ಸ್ಕಾರ್ಪಿಯೋ ವಾಹನದಲ್ಲಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಘಟನೆ ಜಡ್ಡಿನಗದ್ದೆ – ನಡಂಬೂರುವಿನಲ್ಲಿ ನಡೆದಿದೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಅಮಾಸೆಬೈಲು ಪೊಲೀಸರು ಐದು ಜಾನುವಾರುಗಳನ್ನು ರಕ್ಷಿಸಿದ್ದು, ಒಂದು ಕರು ಸಾವನ್ನಪ್ಪಿದೆ.
ಪೊಲೀಸರು ಸ್ಕಾರ್ಪಿಯೋ ವಾಹನವನ್ನು ಜಡ್ಡಿನಗದ್ದೆ – ನಡಂಬೂರು ರಸ್ತೆಯ ತಿರುವಿನಲ್ಲಿ ಅಡ್ಡಗಟ್ಟಿದ್ದರು, ಆದರೆ ಆರೋಪಿಗಳು ವಾಹನ ನಿಲ್ಲಿಸದೇ ಪರಾರಿಯಾಗಿದ್ದರು. ಪೊಲೀಸರು ಬೆನ್ನಟ್ಟಿದ್ದು, ನಿಲ್ಸಕಲ್ ಎಂಬಲ್ಲಿ ವಾಹನ ತಡೆದು ನಿಲ್ಲಿಸಿದಾಗ ಆರೋಪಿಗಳು ಪರಾರಿಯಾಗಿದ್ದಾರೆ.
ಸ್ಕಾರ್ಪಿಯೋ ವಾಹನದಲ್ಲಿ ಹಿಂಸಾತ್ಮಕವಾಗಿ 6 ಜಾನುವಾರುಗಳನ್ನು ಸಾಗಿಸುತ್ತಿದ್ದುದು ಪತ್ತೆಯಾಗಿದ್ದು ಐದು ದನಗಳನ್ನು ರಕ್ಷಿಸಲಾಗಿದೆ. ಇನ್ನೊಂದು ಗಂಡು ಕರು ಸಾವನ್ನಪ್ಪಿದೆ.
ಕೃತ್ಯಕ್ಕೆ ಬಳಸಿದ ವಾಹನ, ಮೊಬೈಲ್ ಫೋನ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
