Home ಸುದ್ದಿಗಳು ಪಿಲಿಕುಳ ನೇತ್ರಾವತಿ-ಫಲ್ಗುಣಿ ಜೋಡುಕರೆ ಕಂಬಳ ಮುಂದೂಡಿಕೆ ಸಾಧ್ಯತೆ

ಪಿಲಿಕುಳ ನೇತ್ರಾವತಿ-ಫಲ್ಗುಣಿ ಜೋಡುಕರೆ ಕಂಬಳ ಮುಂದೂಡಿಕೆ ಸಾಧ್ಯತೆ

0
ಪಿಲಿಕುಳ ನೇತ್ರಾವತಿ-ಫಲ್ಗುಣಿ ಜೋಡುಕರೆ ಕಂಬಳ ಮುಂದೂಡಿಕೆ ಸಾಧ್ಯತೆ

ಮಂಗಳೂರು: ಬಹು ನಿರೀಕ್ಷಿತ ಪಿಲಿಕುಳ “ನೇತ್ರಾವತಿ- ಫಲ್ಗುಣಿ’ ಜೋಡುಕರೆ ಕಂಬಳ ಮುಂದೂಡಿಕೆಯಾಗುವ ಬಹುತೇಕ ಸಾಧ್ಯತೆ ಎದ್ದು ಕಾಣುತ್ತಿದೆ.

ಮೂಡುಶೆಡ್ಡೆ ಪಂಚಾಯತ್‌ ಚುನಾವಣೆ ಕಾರಣಕ್ಕೆ ಈ ಕಂಬಳ ಮುಂದೂಡಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಜಿಲ್ಲಾಡಳಿತ ವತಿಯಿಂದ ಆಯೋಜಿಸಲು ಉದ್ದೇಶಿಸಲಾಗಿರುವ ಈ ಕಂಬಳ ಹತ್ತು ವರ್ಷಗಳ ಬಳಿಕ ಇದೀಗ ನ.17 ಮತ್ತು 18ರಂದು ಪಿಲಿಕುಳದ ಜೋಡುಕರೆಯಲ್ಲಿ ಕಂಬಳ ಆಯೋಜಿಸಲು ಸಿದ್ಧತೆ ನಡೆಸಲಾಗಿತ್ತು.

ನ.23ರಂದು ಚುನಾವಣೆ ನಡೆಯಲಿದ್ದು, ಇದರಿಂದಾಗಿ ಕಂಬಳ ಆಯೋಜಿಸಿದರೆ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ.

ಆದ್ದರಿಂದ ಈ ಬಗ್ಗೆ ನ.11ರಂದು ಜಿಲ್ಲಾಡಳಿತ, ಕಂಬಳ ಸಮಿತಿಯವರ ಸಭೆ ನಡೆಯಲಿದ್ದು, ಇದರಲ್ಲಿ ತೀರ್ಮಾನವಾಗುವ ಸಾಧ್ಯತೆಯಿದೆ. ಒಂದು ವೇಳೆ ಕಂಬಳ ಮುಂದೂಡಿಕೆಯಾದರೆ ನ.17ರಂದು ಪೂರ್ವಭಾವಿ ಕುದಿ ಕಂಬಳ ಆಯೋಜಿಸುವ ಬಗ್ಗೆಯೂ ಚಿಂತನೆ ನಡೆದಿದೆ.

 

LEAVE A REPLY

Please enter your comment!
Please enter your name here