
ಉತ್ತರಾಖಂಡ: ಡೆಹ್ರಾಡೂನ್ನ ಒಎನ್ಜಿಸಿ ಕ್ರಾಸಿಂಗ್ನಲ್ಲಿ ಸರಕು ಸಾಗಣೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಕಾರು ಮರಕ್ಕೆ ಹೋಗಿ ಡಿಕ್ಕಿ ಹೊಡೆದ ಘಟನೆ ನಡೆದಿದೆ.
ಈ ಘಟನೆಯಲ್ಲಿ ಆರು ಮಂದಿ ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೋವಾ ಕಾರು ಬಳ್ಳುಪುರದಿಂದ ಕ್ಯಾಂಟ್ ಪ್ರದೇಶದ ಕಡೆಗೆ ಚಲಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಡಿಕ್ಕಿಯು ಎಷ್ಟು ತೀವ್ರವಾಗಿತ್ತು ಎಂದರೆ ಕಂಟೈನರ್ಗೆ ಡಿಕ್ಕಿಯಾದ ನಂತರ ಕಾರು ದೂರಕ್ಕೆ ಹಾರಿ ಬಿದ್ದಿದೆ.
ಐದು ಮೃತದೇಹಗಳನ್ನು ಡೂನ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಇನ್ನೊಂದು ಮೃತದೇಹವನ್ನು ಮಹಂತ್ ಇಂದ್ರೇಶ್ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರೆಲ್ಲರೂ ವಿದ್ಯಾರ್ಥಿಗಳು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
