Home ಸುದ್ದಿಗಳು ಮಾರುಕಟ್ಟೆಯಲ್ಲಿ ಹಳೆ ಅಡಿಕೆಗೆ ಬೇಡಿಕೆ ಸೃಷ್ಟಿ: ಧಾರಣೆ ಇನ್ನಷ್ಟು ಏರುವ ಸಾಧ್ಯತೆ

ಮಾರುಕಟ್ಟೆಯಲ್ಲಿ ಹಳೆ ಅಡಿಕೆಗೆ ಬೇಡಿಕೆ ಸೃಷ್ಟಿ: ಧಾರಣೆ ಇನ್ನಷ್ಟು ಏರುವ ಸಾಧ್ಯತೆ

0
ಮಾರುಕಟ್ಟೆಯಲ್ಲಿ ಹಳೆ ಅಡಿಕೆಗೆ ಬೇಡಿಕೆ ಸೃಷ್ಟಿ: ಧಾರಣೆ ಇನ್ನಷ್ಟು ಏರುವ ಸಾಧ್ಯತೆ

ಮಂಗಳೂರು: ಮಾರುಕಟ್ಟೆಯಲ್ಲಿ ಹಳೆ ಅಡಿಕೆಗೆ ಬೇಡಿಕೆ ಸೃಷ್ಟಿಯಾಗಿದ್ದು, ಧಾರಣೆ ಇನ್ನಷ್ಟು ಏರುವ ಸಾಧ್ಯತೆಗಳ ಬಗ್ಗೆ ಮಾರುಕಟ್ಟೆ ಮೂಲಗಳು ಸುಳಿವು ನೀಡಿವೆ.

ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಡಬ್ಬಲ್‌ ಚೋಲ್‌ ಧಾರಣೆ 500 ರೂ. ಗಡಿ ದಾಟಿದೆ. ಜತೆಗೆ ಸಿಂಗಲ್‌ ಚೋಲ್‌ ಧಾರಣೆಯೂ ಏರಿಕೆ ಕಂಡಿದೆ.

ಕ್ಯಾಂಪ್ಕೋಗೆ ಹೋಲಿಸಿದರೆ ಹೊರ ಮಾರುಕಟ್ಟೆಯಲ್ಲಿ ಡಬ್ಬಲ್‌ ಚೋಲ್‌, ಸಿಂಗಲ್‌ ಚೋಲ್‌ ಧಾರಣೆ ಹೆಚ್ಚಿತ್ತು. ಅಡಿಕೆ ಆಧಾರಿತ ಉತ್ಪನ್ನಗಳನ್ನು ತಯಾರಿಸುವ ರಾಜ್ಯಗಳಿಂದ ಚಾಲಿ ಅಡಿಕೆಗೆ ಹೆಚ್ಚು ಬೇಡಿಕೆ ಕಂಡು ಬಂದಿದ್ದು, ನಿರೀಕ್ಷೆಗೆ ತಕ್ಕಂತೆ ಪೂರೈಕೆಗೆ ಇಲ್ಲಿ ಅಡಿಕೆ ಸಿಗುತ್ತಿಲ್ಲ.

ಕಳೆದ ವರ್ಷದ ಫಸಲು ನಷ್ಟದ ಜತೆ ಈ ಬಾರಿಯೂ ನಿರೀಕ್ಷಿತ ಫಸಲು ಇಲ್ಲದ ಕಾರಣ ಚಾಲಿ ಅಡಿಕೆಯ ಕೊರತೆ ಉಂಟಾಗಿದೆ. ಹೀಗಾಗಿ ಕೆಲವೆಡೆ ಖುದ್ದಾಗಿ ವ್ಯಾಪಾರಿಗಳು ಬೆಳೆಗಾರರಿಗೆ ಕರೆ ಮಾಡಿ ಅಡಿಕೆ ನೀಡುವಂತೆ ವಿನಂತಿಸುತ್ತಿದ್ದಾರೆ.

ಧಾರಣೆ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಲ್ಲಿರುವ ಬೆಳೆಗಾರರು ಅಡಿಕೆ ಮಾರಾಟ ಮಾಡುವ ಬದಲು ಕಾದು ನೋಡುವ ತಂತ್ರ ಅನುಸರಿಸಿದ್ದು, ಇದರಿಂದ ಮಾರುಕಟ್ಟೆಯಲ್ಲಿ ಮತ್ತಷ್ಟು ಕೊರತೆ ಉಂಟಾಗಲಿದೆ.

ಉಪ ಬೆಳೆಗಳಾದ ಕಾಳು ಮೆಣಸು, ರಬ್ಬರ್‌, ಕೊಕ್ಕೊ ಧಾರಣೆಯಲ್ಲಿ ಏರಿಕೆಯ ಲಕ್ಷಣ ಕಂಡು ಬಂದಿಲ್ಲ.

 

LEAVE A REPLY

Please enter your comment!
Please enter your name here