Home ಸುದ್ದಿಗಳು ನ.15 ರಿಂದ 18 ರವರೆಗೆ ಮಲ್ಲೇಶ್ವರಂ ಕಡಲೆಕಾಯಿ ಪರಿಷೆ

ನ.15 ರಿಂದ 18 ರವರೆಗೆ ಮಲ್ಲೇಶ್ವರಂ ಕಡಲೆಕಾಯಿ ಪರಿಷೆ

0
ನ.15 ರಿಂದ 18 ರವರೆಗೆ ಮಲ್ಲೇಶ್ವರಂ ಕಡಲೆಕಾಯಿ ಪರಿಷೆ

ಬೆಂಗಳೂರು: ನವೆಂಬರ್ 15 ರಿಂದ 18 ರವರೆಗೆ ಮಲ್ಲೇಶ್ವರಂನಲ್ಲಿ ಪ್ರಸಿದ್ಧ ಬಸವನಗುಡಿ ಕಡಲೆಕಾಯಿ ಪರಿಷೆ ನಡೆಯಲಿದೆ.

ಈ ಕುರಿತು ಮಾಹಿತಿ ನೀಡಿದ ಕಾಡುಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿಕೆ ಶಿವರಾಂ, ಈ ಬಾರಿ ಕಡಲೆಕಾಯಿ ಪರಿಷೆ ಪ್ಲಾಸ್ಟಿಕ್ ಮುಕ್ತ ಹಾಗೂ ರೈತ ಸ್ನೇಹಿಯಾಗಿ ನಡೆಯಲಿದ್ದು, ಪ್ಲಾಸ್ಟಿಕ್ ಬದಲಿಗೆ ಕಾಗದ ಮತ್ತು ಬಟ್ಟೆಯ ಚೀಲಗಳನ್ನೇ ಬಳಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸುಮಾರು 40 ಸಾವಿರ ಕಾಗದದ ಚೀಲಗಳನ್ನು ಮಾರಾಟಗಾರರಿಗೆ ವಿತರಿಸಲಾಗುವುದು ವಿದ್ಯಾರ್ಥಿ ಸ್ವಯಂಸೇವಕರು ತಯಾರಿಸಿದ ಚೀಲಗಳು ಎರಡರಿಂದ ಮೂರು ಕಿಲೋ ಕಡಲೆಕಾಯಿಯನ್ನು ತುಂಬಿಸಬಲ್ಲದ್ದಾಗಿದೆ.

ಕಾಗದದ ಚೀಲಗಳು ಮಾತ್ರವಲ್ಲದೆ, ಹಳೆಯ ಸೀರೆಗಳು ಮತ್ತು ಇತರ ವಸ್ತುಗಳನ್ನು ಬಳಸಿ ಸುಮಾರು 6,000 ಬಟ್ಟೆ ಚೀಲಗಳನ್ನು ಸಿದ್ಧಪಡಿಸಲಾಗಿದೆ. ಈ ಚೀಲಗಳನ್ನು ಮಾರಾಟಗಾರರಿಗೆ ವಿತರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಿಂದ ಹಾಗೂ ತಮಿಳುನಾಡು, ಆಂಧ್ರಪ್ರದೇಶದ ರೈತರು ಕೂಡ ಪರಿಷೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

 

LEAVE A REPLY

Please enter your comment!
Please enter your name here