
ಕುಂದಾಪುರ: ಸಕಲೇಶಪುರ ಸುಬ್ರಹ್ಮಣ್ಯ ಘಾಟಿ ಭಾಗದ ರೈಲು ನಿಲ್ದಾಣ ಅಭಿವೃದ್ಧಿ ಸೇರಿದಂತೆ ಹಲವು ಸುಧಾರಣೆಗಳಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ರೈಲ್ವೇ ಸಚಿವರ ಜತೆ ಮಾತುಕತೆ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಸಚಿವರ ಜತೆ ಸುದೀರ್ಘ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.
ಪಂಚಗಂಗಾ ರೈಲು ಸೇರಿದಂತೆ ಹಲವು ವಿಶೇಷ ರೈಲು ಸೇವೆಗಳು ಘಾಟಿ ಭಾಗದಲ್ಲಿ ನಿಧಾನಗತಿಯ ಕಾರಣದಿಂದ ಬೆಂಗಳೂರು ತಲುಪುವಾಗ ವಿಳಂಬವಾಗುವುದು, ಸರಿಯಾದ ಸಮಯಪಟ್ಟಿ ಸಿಗದೆ ಇರುವುದು ಹೀಗೆ ಹಲವು ಸಮಸ್ಯೆಗಳಿಗೆ ಸಿಲುಕಿವೆ.
ಪಂಚಗಂಗಾ ರೈಲು ಕರಾವಳಿಯ ಜೀವನಾಡಿಯಾಗಿದ್ದು, ತನ್ನ ಸಮಯ ಪಟ್ಟಿಯಿಂದಾಗಿಯೇ ಜೀವನಾಡಿ ರೈಲು ಎಂಬ ಖ್ಯಾತಿಗೆ ಪಾತ್ರವಾಗಿದೆ. ಈ ರೈಲು ಇನ್ನೂ ಬೇಗನೆ ಬೆಂಗಳೂರು ತಲುಪಲಿ ಎಂಬ ಬೇಡಿಕೆ ಇಂದಿಗೂ ಈಡೇರಿಲ್ಲ.
ಮುಂದಿನ ಹಲವು ವರ್ಷಗಳ ಕರಾವಳಿಯ ರೈಲು ಸೇವೆಗಳು ಮತ್ತು ಹೆದ್ದಾರಿ ಸುಧಾರಣೆಗಳ ಕುರಿತು ಕುಂದಾಪುರ ರೈಲು ಸಮಿತಿ ಸಂಸದರ ಜತೆ ವಿಚಾರ ವಿನಿಮಯ ಮಾಡಿದೆ ಎಂದರು.
