
ಉಡುಪಿ: ಪಾರ್ಟ್ ಟೈಮ್ ಉದ್ಯೋಗ ಮಾಡಿದಲ್ಲಿ ಹೆಚ್ಚಿನ ಲಾಭಾಂಶ ಮಾಡಬಹುದು ಎಂದು ನಂಬಿಸಿ ವಂಚನೆ ಮಾಡಿದ ಘಟನೆ ನಡೆದಿದೆ.
ಅರ್ಚನಾ (25) ಎಂಬವರು ಹಣ ಕಳೆದುಕೊಂಡ ಮಹಿಳೆ.
ಅರ್ಚನಾ ಅವರು ಪಾರ್ಟ್‌ಟೈಮ್ ಜಾಬ್ ಬಗ್ಗೆ ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸುತ್ತಿದ್ದಾಗ ಇನ್‌ಸ್ಟ್ರಾಗ್ರಾಮ್‌ನಲ್ಲಿ ಸಿಕ್ಕಿದ ಪಾರ್ಟ್‌ಟೈಮ್ ಜಾಬ್ ಬಗ್ಗೆ ಲಿಂಕ್ ಒಂದನ್ನು ಕ್ಲಿಕ್ ಮಾಡಿದರು. ಆಗ ಅವರಿಗೆ ಪಾರ್ಟ್‌ಟೈಮ್ ಜಾಬ್ ಬಗ್ಗೆ ವಾಟ್ಸಾಪ್ ಸಂದೇಶ ಬಂದಿದೆ.
ಅಮೆಜಾನ್ ಫ್ರೆಶರ್ ಜಾಬ್ ಇನ್ ಇಂಡಿಯಾನಲ್ಲಿ ಟಾಸ್ಕ್ ನಡೆಸಿ ಹಣ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಲಾಭಾಂಶ ಪಡೆಯಬಹುದು ಎಂಬುದಾಗಿ ನಂಬಿಸಲಾಗಿತ್ತು.
ಅಪರಿಚಿತ ವ್ಯಕ್ತಿ ಯುಪಿಐ ಐಡಿಗೆ ಹಣವನ್ನು ಹೂಡಿಕೆ ಮಾಡಲು ಹೇಳಿದ್ದು ಇದನ್ನು ನಂಬಿದ ಮಹಿಳೆ ಅಪರಿಚಿತರು ಸೂಚಿಸಿದ ವಿವಿಧ ಯುಪಿಐ ಐಡಿಗೆ ಹಂತಹಂತವಾಗಿ ಒಟ್ಟು 1,94,529 ರೂ. ಹಣವನ್ನು ವರ್ಗಾಯಿಸಿದ್ದಾರೆ.
ನಂತರ ಮೋಸ ಹೋಗಿರುವುದಾಗಿ ತಿಳಿದು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
