Home ಸುದ್ದಿಗಳು ಕಟ್ಟಡದ ವಿದ್ಯುತ್‌ ಸಂಪರ್ಕದ ಮೀಟರ್‌ನಲ್ಲಿ ಶಾರ್ಟ್‌ ಸರ್ಕ್ಯೂಟ್: ತಪ್ಪಿದ ಅನಾಹುತ

ಕಟ್ಟಡದ ವಿದ್ಯುತ್‌ ಸಂಪರ್ಕದ ಮೀಟರ್‌ನಲ್ಲಿ ಶಾರ್ಟ್‌ ಸರ್ಕ್ಯೂಟ್: ತಪ್ಪಿದ ಅನಾಹುತ

0
ಕಟ್ಟಡದ ವಿದ್ಯುತ್‌ ಸಂಪರ್ಕದ ಮೀಟರ್‌ನಲ್ಲಿ ಶಾರ್ಟ್‌ ಸರ್ಕ್ಯೂಟ್: ತಪ್ಪಿದ ಅನಾಹುತ

ಕಡಬ: ವಾಣಿಜ್ಯ ಕಟ್ಟಡದ ವಿದ್ಯುತ್‌ ಸಂಪರ್ಕದ ಮೀಟರ್‌ನಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್ ಉಂಟಾಗಿ ಮೀಟರ್‌ ಪೆಟ್ಟಿಗೆಗೆ ಬೆಂಕಿ ತಗುಲಿದ ಘಟನೆ ನಡೆದಿದೆ.

ಕೊಯಿಲ ಗ್ರಾಮ ಪಂಚಾಯತ್‌ ಅಧೀನದಲ್ಲಿರುವ ವಾಣಿಜ್ಯ ಮಳಿಗೆಯಲ್ಲಿ ಪೈಂಟ್‌ ಅಂಗಡಿ ಸೇರಿದಂತೆ 4 ಅಂಗಡಿಗಳಿದ್ದು, ಅವುಗಳಿಗೆ ವಿದ್ಯುತ್‌ ಸಂಪರ್ಕದ ಮೀಟರ್‌ ಹೊರಗಡೆ ಗೋಡೆಯಲ್ಲಿ ಅಳವಡಿಸಲಾಗಿತ್ತು.

ವಿದ್ಯುತ್‌ ಸಂಪರ್ಕದ ಮೀಟರ್‌ನಲ್ಲಿ ಬೆಂಕಿ ಉರಿಯಲಾರಂಭಿಸಿ ಕಟ್ಟಡದ ಸುತ್ತ ಹೊಗೆಯಾಡತೊಡಗಿತ್ತು. ರಾತ್ರಿ 3 ಗಂಟೆಯ ಹೊತ್ತಿಗೆ ರಸ್ತೆಯಲ್ಲಿ ಹೋಗುತ್ತಿದ್ದ ವಾಹನದ ಮಂದಿ ಅದನ್ನು ಗಮನಿಸಿ ಅಂಗಡಿ ಪಕ್ಕದವರಿಗೆ ಮತ್ತು ಅಂಗಡಿ ಮಾಲಕರಿಗೆ ಮಾಹಿತಿ ನೀಡಿದ್ದರು.

ಪೆಟ್ಟಿಗೆಯಲ್ಲಿ ತಡರಾತ್ರಿಯಲ್ಲಿ ವಿದ್ಯುತ್‌ ಉರಿಯಲಾರಂಭಿಸಿದ್ದು, ಸ್ಥಳೀಯರ ಸಮಯೋಚಿತ ಕಾರ್ಯಾಚರಣೆಯಿಂದ ಭಾರೀ ಬೆಂಕಿ ಅವಘಡವೊಂದು ತಪ್ಪಿದಂತಾಗಿದೆ.

ಅಷ್ಟರಲ್ಲಿ ಅಂಗಡಿ ಕಟ್ಟಡದ ಹತ್ತಿರದ ನಿವಾಸಿಗಳು ಮತ್ತು ಅಂಗಡಿ ಮಾಲೀಕರು ಸ್ಥಳಕ್ಕೆ ಆಗಮಿಸಿ ಉರಿಯುತ್ತಿದ್ದ ಮೀಟರ್‌ ಪೆಟ್ಟಿಗೆಯ ಬೆಂಕಿಯನ್ನು ನಂದಿಸಿದ್ದಾರೆ.

ಸುದ್ದಿ ತಿಳಿದ ಮೆಸ್ಕಾಂ ಸಿಬಂದಿ ಸ್ಥಳಕ್ಕೆ ಆಗಮಿಸಿ ವಿದ್ಯುತ್‌ ಕಂಬದಿಂದ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಿದರು. ಸ್ಥಳೀಯರ ಸಮಯೋಚಿತ ಕಾರ್ಯಾಚರಣೆಯಿಂದಾಗಿ ಭಾರೀ ಅವಘಡವೊಂದು ತಪ್ಪಿದಂತಾಗಿದೆ.

 

LEAVE A REPLY

Please enter your comment!
Please enter your name here