Home ಸುದ್ದಿಗಳು ಚಾಲಿ ಅಡಿಕೆ ಧಾರಣೆ ಏರುಮುಖದತ್ತ: ಡಬ್ಬಲ್‌ ಚೋಲ್‌ಗೆ ಬೇಡಿಕೆ ಸೃಷ್ಟಿ

ಚಾಲಿ ಅಡಿಕೆ ಧಾರಣೆ ಏರುಮುಖದತ್ತ: ಡಬ್ಬಲ್‌ ಚೋಲ್‌ಗೆ ಬೇಡಿಕೆ ಸೃಷ್ಟಿ

0
ಚಾಲಿ ಅಡಿಕೆ ಧಾರಣೆ ಏರುಮುಖದತ್ತ: ಡಬ್ಬಲ್‌ ಚೋಲ್‌ಗೆ ಬೇಡಿಕೆ ಸೃಷ್ಟಿ

ಮಂಗಳೂರು: ಕಳೆದ ಕೆಲವು ದಿನಗಳಿಂದ ಚಾಲಿ ಅಡಿಕೆ ಧಾರಣೆ ಏರುಮುಖದತ್ತ ಸಾಗುತ್ತಿದ್ದು ಡಬ್ಬಲ್‌ ಚೋಲ್‌ಗೆ ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಯಾಗಿದೆ.

ನ. 19 ರಂದು ಹೊರ ಮಾರುಕಟ್ಟೆಯಲ್ಲಿ ಡಬ್ಬಲ್‌ ಚೋಲ್‌ ಧಾರಣೆ 510ರಿಂದ 512 ರೂ. ತನಕವೂ ಇತ್ತು. ಕೆಲವೆಡೆ 505ರಿಂದ 510 ರೂ. ಇತ್ತು.

ಮಾರುಕಟ್ಟೆಯಲ್ಲಿ ಧಾರಣೆ ಮತ್ತೆ ಏರಿಕೆ ಕಡೆ ಮುಖ ಮಾಡಿದೆ. ಅಡಿಕೆ ಒಂದು ವಾರದ ಧಾರಣೆ ಗಮನಿಸಿದರೆ ಹೊಸ ಅಡಿಕೆ, ಸಿಂಗಲ್‌ ಚೋಲ್‌ ಧಾರಣೆಯಲ್ಲಿಯೂ ಹೆಚ್ಚಳ ದಾಖಲಾಗಿದೆ.

ಕಳೆದ ಮೂರು ದಿನಗಳಲ್ಲಿ ಹೊಸ ಅಡಿಕೆ ಧಾರಣೆ ಕೆ.ಜಿ.ಗೆ 5 ರೂ., ಸಿಂಗಲ್‌ ಚೋಲ್‌ ಧಾರಣೆ 10 ರೂ.ನಷ್ಟು ಏರಿಕೆ ಕಂಡಿದೆ. ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆ 350 -355 ರೂ., ಸಿಂಗಲ್‌ ಚೋಲ್‌ ಧಾರಣೆ 435-438 ರೂ. ತನಕ ಇತ್ತು.

ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ 500 ರೂ. ಇತ್ತು. ನ. 15 ರಂದು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆಗೆ 330 ರೂ., ಸಿಂಗಲ್‌ ಚೋಲ್‌ ಧಾರಣೆ 420 ರೂ. ತನಕ ಇತ್ತು.

 

LEAVE A REPLY

Please enter your comment!
Please enter your name here