
ಉಳ್ಳಾಲ: ಅಂಗಡಿಯೊಂದರ ಬಳಿ ಆಟವಾಡುತ್ತಿದ್ದ ಮೂರರ ಹರೆಯದ ಬಾಲಕಿಯೊಬ್ಬಳ ಮೇಲೆ 70ರ ಹರೆಯದ ವೃದ್ಧ ಲೈಂಗಿಕ ಕಿರುಕುಳ ನೀಡಿದ ಘಟನೆ ಉಳ್ಳಾಲ ತಾಲೂಕಿನ ಬಾಳೆಪುಣಿ ಬಳಿ ನಡೆದಿದೆ.
ಆರೋಪಿಯನ್ನು ಪುತ್ತೂರು ನಿವಾಸಿ, ಪ್ರಸ್ತುತ ಮುದುಂಗಾರುಕಟ್ಟೆಯಲ್ಲಿ ವಾಸವಾಗಿರುವ ಅಬ್ದುಲ್ಲಾ (70) ಎಂದು ಗುರುತಿಸಲಾಗಿದೆ.
ಮಗುವು ಆಟವಾಡುತ್ತಿದ್ದಾಗ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದು, ಅಸ್ವಸ್ಥಗೊಂಡ ಮಗುವನ್ನು ಗಮನಿಸಿ ವೈದ್ಯಕೀಯ ತಪಾಸಣೆ ನಡೆಸಿದಾಗ ವಿಷಯ ಬಹಿರಂಗವಾಗಿದೆ.
ಬಾಲಕಿಯ ತಾಯಿ ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
