
ಮಧ್ಯ ಅಮೆರಿಕ: ಕೋಸ್ಟರಿಕಾದಲ್ಲಿ 6 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ಪತನಗೊಂಡ ಘಟನೆ ಕೋಸ್ಟರಿಕಾದ ರಾಜಧಾನಿ ಸ್ಯಾನ್ ಜೋಸ್‌ನ ಆಗ್ನೇಯದ ಮೌಂಟ್ ಪಿಕೊ ಬ್ಲಾಂಕೊ ಬಳಿ ನಡೆದಿದೆ.
ಶೋಧ ಮತ್ತು ರಕ್ಷಣಾ ಅಧಿಕಾರಿಗಳು ಬೆಟ್ಟದ ಮೇಲೆ ಅವಶೇಷಗಳನ್ನು ಕಂಡುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ವಿಮಾನದಲ್ಲಿದ್ದವರ ಗುರುತು ಪತ್ತೆಯಾಗಿಲ್ಲ ಎನ್ನಲಾಗುತ್ತಿದೆ.
ಕೋಸ್ಟರಿಕಾದ ಉತ್ತರ ಕೆರಿಬಿಯನ್ ಕರಾವಳಿಯಲ್ಲಿರುವ ಟೋರ್ಟುಗುರೊದಿಂದ ವಿಮಾನವು ಟೇಕ್ ಆಫ್ ಆಗಿದ್ದು ಸ್ಯಾನ್ ಜೋಸ್‌ಗೆ ಹೋಗುತ್ತಿತ್ತು ಎಂದು ವರದಿಯಾಗಿದೆ.
ಸೆಸ್ನಾ 206 8.6 ಮೀಟರ್ ಉದ್ದ ಮತ್ತು 11 ಮೀಟರ್ ರೆಕ್ಕೆಗಳನ್ನು ಹೊಂದಿರುವ ಲಘು ವಿಮಾನವಾಗಿದೆ ಎಂದು ಹೇಳಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಕಡಿಮೆ ದೂರದ ಪ್ರಯಾಣಕ್ಕೆ ಬಳಸಲಾಗುತ್ತದೆ.
ನಾಗರಿಕ ವಿಮಾನಯಾನ ಉಪನಿರ್ದೇಶಕ ಲೂಯಿಸ್ ಮಿರಾಂಡಾ ಕೂಡ ಇದನ್ನು ಖಚಿತಪಡಿಸಿದ್ದಾರೆ.
