
ಕಾರ್ಕಳ: ಸಾಲ ಬಾಧೆಯಿಂದ ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿ ಮನನೊಂದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಕಸಬಾ ಗ್ರಾಮದ ಕುಂಟುಲ್ಪಾಡಿ ನಿವಾಸಿ ಹರೀಶ್ (35) ಅವರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿದ್ದಾರೆ.
ವಿದೇಶದಲ್ಲಿ ಕೆಲಸ ಮಾಡಿ ಕೊಂಡಿದ್ದ ಅವರು 4 ವರ್ಷದ ಹಿಂದೆ ಹೊಸದಾಗಿ ಮನೆ ಕಟ್ಟಿದ್ದರು. ಈಗ 4 ತಿಂಗಳ ಹಿಂದೆ ಊರಿಗೆ ಬಂದಿದ್ದು, ಮನೆ ಕಟ್ಟುವಾಗ ವಿಪರೀತ ಸಾಲ ಮಾಡಿಕೊಂಡಿದ್ದರು.
ಊರಿನಲ್ಲಿ ಸರಿಯಾದ ಕೆಲಸ ಇರಲಿಲ್ಲ. ವಾಪಸು ವಿದೇಶಕ್ಕೂ ಹೋಗಲಾರದೆ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದರು ಎನ್ನಲಾಗುತ್ತಿದೆ.
ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
