Home ಸುದ್ದಿಗಳು ಎಪಿಕೆ ಫೈಲ್‌ ಮೂಲಕ ನಕಲಿ ಇ-ಚಲನ್‌ ಕಳುಹಿಸಿ 1.31 ಲ.ರೂ. ವಂಚನೆ

ಎಪಿಕೆ ಫೈಲ್‌ ಮೂಲಕ ನಕಲಿ ಇ-ಚಲನ್‌ ಕಳುಹಿಸಿ 1.31 ಲ.ರೂ. ವಂಚನೆ

0
ಎಪಿಕೆ ಫೈಲ್‌ ಮೂಲಕ ನಕಲಿ ಇ-ಚಲನ್‌ ಕಳುಹಿಸಿ 1.31 ಲ.ರೂ. ವಂಚನೆ

ಮಂಗಳೂರು: ಎಪಿಕೆ ಫೈಲ್‌ ಮೂಲಕ ಸಂಚಾರ ನಿಯಮ ಉಲ್ಲಂಘನೆಯ ಬಗ್ಗೆ ನಕಲಿ ಇ-ಚಲನ್‌ ಕಳುಹಿಸಿ ವ್ಯಕ್ತಿಯೊಬ್ಬರಿಂದ1.31 ಲ.ರೂ. ಹಣವನ್ನು ವರ್ಗಾಯಿಸಿಕೊಂಡ ಘಟನೆ ನಡೆದಿದೆ.

ನ. 24ರಂದು ವ್ಯಕ್ತಿಯೊಬ್ಬರಿಗೆ ವಾಟ್ಸ್‌ ಆ್ಯಪ್‌ ನಂಬರ್‌ನಿಂದ ಮೆಸೇಜ್‌ ಬಂದಿದ್ದು,ಅದರಲ್ಲಿ VAHAN PARIVAHAN.apk ಫೈಲ್‌ ಇತ್ತು. ಅದನ್ನು ಡೌನ್‌ಲೋಡ್‌ ಮಾಡಿದಾಗ ಅವರ ಮೊಬೈಲ್‌ಗೆ 16 ಒಟಿಪಿಗಳು ಬಂದಿದ್ದವು.

ಅನಂತರ ಅವರ ಫ್ಲಿಪ್‌ಕಾರ್ಟ್‌ ಹಾಗೂ ಅಮೆಜಾನ್‌ನಲ್ಲಿ ಅವರ ಕ್ರೆಡಿಟ್‌ ಕಾರ್ಡ್‌ ಮೂಲಕ 30,400 ರೂ., ಡೆಬಿಟ್‌ ಕಾರ್ಡ್‌ ಮೂಲಕ 16,700 ರೂ. ಮತ್ತು ಪೇ ಲೇಟರ್‌ನಲ್ಲಿ 71,496 ರೂ. ಹಣ ವರ್ಗಾವಣೆಯಾದ ಬಗ್ಗೆ ಮೊಬೈಲ್‌ಗೆ ಮೆಸೇಜ್‌ ಬಂದಿತ್ತು. ಒಟ್ಟು 1,31,396 ರೂ. ವಂಚಿಸಿರುವುದು ಗೊತ್ತಾಗಿದೆ.

ಕೂಡಲೇ ಅವರು ತಮ್ಮ ಮೊಬೈಲ್‌ ಮೂಲಕ ಡೆಬಿಟ್‌ ಕಾರ್ಡ್‌ ಹಾಗೂ ಕ್ರೆಡಿಟ್‌ ಕಾರ್ಡ್‌ ಅನ್ನು ಬ್ಲಾಕ್‌ ಮಾಡಿಸಿದ್ದರು.

ನಕಲಿ ಇ-ಚಲನ್‌ ಕಳುಹಿಸಿ ಎಪಿಕೆ ಫೈಲ್‌ನ ಮೂಲಕ ಅವರ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ನ ಮಾಹಿತಿ ಪಡೆದುಕೊಂಡಿದ್ದರು.

ಫ್ಲಿಪ್‌ಕಾರ್ಟ್‌ನಲ್ಲಿ 39,398 ರೂ. ಮೌಲ್ಯದ ವನ್‌ಪ್ಲಸ್‌ ಮೊಬೈಲ್‌, 32,398 ರೂ. ಮೌಲ್ಯದ ಮೊಟೊರೊಲಾ ಎಜ್‌ ಮೊಬೈಲ್‌, 12,800 ರೂ. ಮೌಲ್ಯದ ಏರ್‌ಪೋಡ್‌, 14,700 ರೂ. ಹಾಗೂ 29,400 ರೂ. ಹಾಗೂ 3,000 ರೂ. ಮೌಲ್ಯದ ಫ್ಲಿಪ್‌ಕಾರ್ಟ್‌ ವೋಚರ್‌ಗಳನ್ನು ಹೊಸದಿಲ್ಲಿಯ ವಿಳಾಸದಲ್ಲಿರುವ ವ್ಯಕ್ತಿಗೆ ಆರ್ಡರ್‌ ಮಾಡಿದ್ದು ತಿಳಿದು ಬಂದಿದೆ.

ಈ ಬಗ್ಗೆ ಮಂಗಳೂರಿನ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

LEAVE A REPLY

Please enter your comment!
Please enter your name here