Home ಸುದ್ದಿಗಳು ಸ್ನಾನಕ್ಕೆಂದು ನದಿಗೆ ತೆರಳಿದ ಮೂವರು ಯುವಕರು ನೀರುಪಾಲು

ಸ್ನಾನಕ್ಕೆಂದು ನದಿಗೆ ತೆರಳಿದ ಮೂವರು ಯುವಕರು ನೀರುಪಾಲು

0
ಸ್ನಾನಕ್ಕೆಂದು ನದಿಗೆ ತೆರಳಿದ ಮೂವರು ಯುವಕರು ನೀರುಪಾಲು

ಬೆಳ್ತಂಗಡಿ: ನದಿಗೆ ಸ್ನಾನಕ್ಕೆಂದು ತೆರಳಿದ ಮೂವರು ಯುವಕರು ನೀರುಪಾಲಾಗಿರುವ ಘಟನೆ ವೇಣೂರು ಸಮೀಪದ ಬರ್ಕಜೆ ಡ್ಯಾಂ ಬಳಿ ನಡೆದಿದೆ.

ಮೃತರನ್ನು ಮೂಡುಬಿದಿರೆ ತಾಲೂಕಿನ ಎಡಪದವು ನಿವಾಸಿ ಲಾರೆನ್ಸ್(20), ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ಸೂರಜ್(19), ಬಂಟ್ವಾಳ ಗ್ರಾಮದ ವಗ್ಗದ ಜೈಸನ್(19) ಎಂದು ಗುರುತಿಸಲಾಗಿದೆ.

ಮೃತಪಟ್ಟ ಮೂವರು ಮಂಗಳೂರು ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.

ತಾಲೂಕಿನ ಮೂಡುಕೋಡಿ ಗ್ರಾಮದ ವಾಲ್ಟರ್ ಎಂಬವರ ಮನೆಗೆ ಕಾರ್ಯಕ್ರಮದ ಹಿನ್ನೆಲೆ ಬಂದಿದ್ದರು. ನ.27 ರಂದು ಊಟ ಮೂಗಿಸಿ ಮೂಡುಕೋಡಿ ಗ್ರಾಮದ ಬರ್ಕಜೆ ಡ್ಯಾಂ ಬಳಿ ಸ್ನಾನಕ್ಕೆ ತೆರಳಿದ್ದರು.

ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಮೂವರು ಯುವಕರು ನೀರುಪಾಲಾಗಿದ್ದಾರೆ. ಮೂವರ ಮೃತದೇಹವನ್ನೂ ನೀರಿನಿಂದ ಹೊರ ತೆಗೆಯಲಾಗಿದೆ.

 

LEAVE A REPLY

Please enter your comment!
Please enter your name here