Home ಸುದ್ದಿಗಳು ಉಡುಪಿ: ಆಸ್ಪತ್ರೆ ಕಟ್ಟಡದ 6ನೇ ಅಂತಸ್ತಿನಿಂದ ಬಿದ್ದು ಕಾರ್ಮಿಕ ಸಾವು

ಉಡುಪಿ: ಆಸ್ಪತ್ರೆ ಕಟ್ಟಡದ 6ನೇ ಅಂತಸ್ತಿನಿಂದ ಬಿದ್ದು ಕಾರ್ಮಿಕ ಸಾವು

0
ಉಡುಪಿ: ಆಸ್ಪತ್ರೆ ಕಟ್ಟಡದ 6ನೇ ಅಂತಸ್ತಿನಿಂದ ಬಿದ್ದು ಕಾರ್ಮಿಕ ಸಾವು

ಉಡುಪಿ: ಆಸ್ಪತ್ರೆ ಕಟ್ಟಡದ ಪ್ರೂಫಿಂಗ್‌ ಕೆಲಸ ಮಾಡುತ್ತಿದ್ದ ಕಾರ್ಮಿಕನೋರ್ವ 6ನೇ ಅಂತಸ್ತಿನಿಂದ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಅಜ್ಜರಕಾಡುವಿನಲ್ಲಿ ನಡೆದಿದೆ.

ವಾಟರ್‌ ಪ್ರೂಫಿಂಗ್‌ ಕೆಲಸ ಮಾಡಿಕೊಂಡಿದ್ದ ಮೂಡುಬೆಳ್ಳೆ ನಿವಾಸಿ ಸಂತೋಷ್‌ (46) ಮೃತಪಟ್ಟವರು.

ನಿರ್ಮಾಣ ಹಂತದಲ್ಲಿದ್ದ ಜಿಲ್ಲಾ ಸರಕಾರಿ ಆಸ್ಪತ್ರೆಯ ಕಟ್ಟಡದ ವಾಟರ್‌ ಪ್ರೂಫಿಂಗ್‌ ಕೆಲಸದಲ್ಲಿ ತೊಡಗಿಕೊಂಡಿದ್ದರು.

ಡಿ. 3ರಂದು ಕೆಲಸ ಮುಗಿಸಿ ವಾಪಸ್‌ ಕೆಳಗಡೆ ಬರಲು 6ನೇ ಅಂತಸ್ತಿನ ಮೇಲೆ ಅಳವಡಿಸಿದ ಪಾಲಿಕಾಮರ್‌ ಶೀಟ್‌ನಲ್ಲಿ ನಡೆದುಕೊಂಡು ಬರುತ್ತಿದ್ದಾಗ ಅವುಗಳ ಮಧ್ಯೆ ಅಳವಡಿಸಿದ್ದ ಟ್ರಾನ್ಸ್‌ಫ‌ರೆಂಟ್‌ ಶೀಟ್‌ ಮೇಲೆ ಕಾಲು ಇಟ್ಟ ಕಾರಣ ಶೀಟ್‌ ತೆಳುವಿದ್ದದ್ದರಿಂದ ಸಂತೋಷ್‌ ಅವರು ಆಯತಪ್ಪಿ 6ನೇ ಅಂತಸ್ತಿನ ಮೇಲ್ಛಾವಣಿನಿಂದ ನೆಲಕ್ಕೆ ಬಿದ್ದಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಅವರು ಮೃತಟ್ಟಿರುವುದನ್ನು ದೃಢಪಡಿಸಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

LEAVE A REPLY

Please enter your comment!
Please enter your name here