Home ಸುದ್ದಿಗಳು ಮನೆಗೆ ಬಂದು ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸಿದ ಅನ್ಯ ಕೋಮಿನ ಯುವಕ

ಮನೆಗೆ ಬಂದು ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸಿದ ಅನ್ಯ ಕೋಮಿನ ಯುವಕ

0
ಮನೆಗೆ ಬಂದು ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸಿದ ಅನ್ಯ ಕೋಮಿನ ಯುವಕ

ಮಂಗಳೂರು: ಅನ್ಯ ಕೋಮಿನ ಯುವಕನೊಬ್ಬ ಮನೆಗೆ ಬಂದು ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸಿದ ಘಟನೆ ಕುಲಶೇಖರದಲ್ಲಿ ನಡೆದಿದೆ.

ಆರೋಪಿ ಯುವಕನನ್ನು ಶಿವಮೊಗ್ಗದ ಸಯ್ಯದ್‌ ನಹೀಂ (25) ಎಂದು ಗುರುತಿಸಲಾಗಿದೆ.

ಈತ ಮಹಿಳೆ ಹಾಗೂ ಅವರ ಸಹೋದರಿಯ ಮಗಳೊಂದಿಗೆ ಅಸಭ್ಯವಾಗಿ ವರ್ತಿಸಿ ಅವಾಚ್ಯವಾಗಿ ನಿಂದಿಸಿದ್ದಾನೆ. ಈ ವೇಳೆ ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿದ್ದರು. ಪೊಲೀಸರು ಆರೋಪಿಯನ್ನು ಕರೆದೊಯ್ದು ಪ್ರಕರಣ ದಾಖಲಿಸಿದ್ದಾರೆ.

ಆರೋಪಿ ನಹೀಂಗೆ ವರ್ಷದ ಹಿಂದೆ ಮಹಿಳೆಯ ಪರಿಚಯವಾಗಿದ್ದು, ಶುಕ್ರವಾರ ಮಂಗಳೂರಿಗೆ ಬಂದಿದ್ದವ ಮಹಿಳೆಯ ಮನೆಗೆ ಬಂದು ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

 

LEAVE A REPLY

Please enter your comment!
Please enter your name here