Home ಸುದ್ದಿಗಳು ಡಿ.13 ರಿಂದ 29ರ ವರೆಗೆ ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಗೀತೋತ್ಸವ

ಡಿ.13 ರಿಂದ 29ರ ವರೆಗೆ ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಗೀತೋತ್ಸವ

0
ಡಿ.13 ರಿಂದ 29ರ ವರೆಗೆ ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಗೀತೋತ್ಸವ

ಉಡುಪಿ: ಜಗದ್ಗುರು ಶ್ರೀಮನ್ ಮದ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀ ಮದುಪೇಂದ್ರತೀರ್ಥ ಪೀಠಮ್ ರಜತಪೀಠಪುರ ಉಡುಪಿ, ಪರ್ಯಾಯ ಶ್ರೀ ಪುತ್ತಿಗೆ ಕೃಷ್ಣ ಮಠ ಇದರ ಆಶ್ರಯದಲ್ಲಿ ಬೃಹತ್ ಗೀತೋತ್ಸವ ಕಾರ್ಯಕ್ರಮವು ಡಿ. 13ರಿಂದ 29ರವರೆಗೆ ನಡೆಯಲಿದೆ.

ಡಿ.13 ರಂದು ಗಾಯನ ವ್ಯಾಖ್ಯಾನ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ವಿ. ಡಾ. ವೇಣುಗೋಪಾಲ್ ಅಗ್ನಿಹೋತ್ರಿ ವ್ಯಾಖ್ಯಾನ ಮಾಡಲಿದ್ದು, ಶ್ರೀ ವರದೇಂದ್ರ ಗಂಗಾಖೇಡ್ ರಾಯಚೂರು ಗಾಯನ ನಡೆಸಿಕೊಡಲಿದ್ದಾರೆ.

ಡಿ.14 ರಂದು ಸ್ವರೂಪ ಅಧ್ಯಯನ ಕೇಂದ್ರ ಮಂಗಳೂರು ಇದರ ವಿದ್ಯಾರ್ಥಿಗಳಿಂದ ಸ್ಮೃತಿ ಪ್ರತಿಭಾ ಪ್ರದರ್ಶನ ಮತ್ತು ಗೀತಾ ತ್ರಯೋದಶಾವಧನಾ ಕಾರ್ಯಕ್ರಮ ನಡೆಯಲಿದೆ.

ಡಿ.15ರಂದು ಕಲಾಬಿಂದು ಪ್ರಕಾಶನ ಮಂಗಳೂರು ಇವರಿಂದ ಗೀತಾ ಕವಿಗೋಷ್ಠಿ ನಡೆಯಲಿದ್ದು, ಡಿ.16 ರಂದು ಡಾ.ಎಂ. ಪ್ರಭಾಕರ ಜೋಶಿ ಅವರಿಂದ ಯಕ್ಷಗಾನ ಮತ್ತು ಭಗವದ್ಗೀತೆ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಡಿ.17 ರಂದು ಪರಮಪೂಜ್ಯ ಶ್ರೀ ಸುಜ್ಞಾನೇಂದ್ರತೀರ್ಥ ವಿರಚಿತ ಗೀತಾಮೃತಸಾರ ಗ್ರಂಥ ಬಿಡುಗಡೆ ಕಾರ್ಯಕ್ರಮ, ಡಿ.18 ರಂದು ಗಂಗಾವತಿ ಪ್ರಾಣೇಶ್ ಮತ್ತು ತಂಡದವರಿಂದ ಹಾಸ್ಯೋತ್ಸವ ಕಾರ್ಯಕ್ರಮ ಹಾಗೂ ಡಿ.19 ರಂದು ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರಿಂದ ಆರ್ ಎಸ್ ಎಸ್ ಮತ್ತು ಭಗವದ್ಗೀತೆ ಉಪನ್ಯಾಸ ನಡೆಯಲಿದೆ.

ಡಿ. 20ರಂದು ಮುಕುಂದ ಕೃಪಾ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಲಿದ್ದು, ಡಿ. 21 ರಂದು ಗೋ ಮಧುಸೂದನ್ ವಿರಚಿತ ಗೀತಾ ಪುಸ್ತಕ ಬಿಡುಗಡೆ ಸಮಾರಂಭ, ಡಿ. 22ರಂದು ರೋಹಿತ್ ಚಕ್ರತೀರ್ಥ ಅವರಿಂದ ಯುವಕರಿಗೆ ಭಗವದ್ಗೀತೆ ಉಪನ್ಯಾಸ. ಡಿ. 23 ರಂದು ಅಡ್ಡಂಡ ಕಾರ್ಯಪ್ಪ ಅವರಿಂದ ಶಾಸ್ತ್ರ ಮತ್ತು ಭಗವದ್ಗೀತೆ ಉಪನ್ಯಾಸ, ಡಿ. 24 ರಂದು ಕೆಪಿ ಪುತ್ತೂರಾಯ ಅವರಿಂದ ಭಾರತೀಯ ಸಂಸ್ಕೃತಿ ಮತ್ತು ಭಗವದ್ಗೀತೆ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.

ಡಿ. 25ರಂದು ಜಸ್ಟಿಸ್ ವಿ. ಶ್ರೀಶಾನಂದ, ಚಿರಂಜೀವಿ ಭಟ್ ಹಾಗೂ ಮತ್ತಿತರರಿಂದ ನ್ಯಾಯಾಂಗದಲ್ಲಿ ಭಗವದ್ಗೀತೆಯ ಪ್ರಸ್ತುತತೆಯ ಬಗ್ಗೆ ಸಂವಾದ ಕಾರ್ಯಕ್ರಮ. ಡಿ. 26ರಂದು ಗಂಜೀಫ ರಘುಪತಿ ಭಟ್ ಅವರಿಂದ ಚಿತ್ರಕಲೆ ಮತ್ತು ಭಗವದ್ಗೀತೆ ಉಪನ್ಯಾಸ ಹಾಗೂ ಡಿ. 27 ರಂದು ಡಾ| ವೀಣಾ ಬನ್ನಂಜೆ ಅವರಿಂದ ವಚನ ಸಾಹಿತ್ಯದ ಮೇಲೆ ಗೀತೆಯ ಪ್ರಭಾವದ ಕುರಿತು ಉಪನ್ಯಾಸ ನಡೆಯಲಿದೆ.

ಡಿ. 28 ರಂದು ಅನಿವಾಸಿ ಭಾರತೀಯರ ಗೀತಾ ಸಮಾವೇಶ ಹಾಗೂ ಡಿ. 29ರಂದು ಗೀತೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದೆ.

 

LEAVE A REPLY

Please enter your comment!
Please enter your name here