
ಕಾರ್ಕಳ: ಅತ್ತೂರು ನಿಟ್ಟೆಯ ಶ್ರೀ ರಾಜರಾಜೇಶ್ವರಿ ಸದ್ಗುರು ಶ್ರೀನಿತ್ಯಾನಂದ ಕ್ಷೇತ್ರ ನೆಲ್ಲಿಯಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ನಿಟ್ಟೆ ಇದರ ಆಶ್ರಯದಲ್ಲಿ ದತ್ತ ಜಯಂತಿ ಅಂಗವಾಗಿ ದತ್ತ ಪೂಜೆ, ದತ್ತ ಹೋಮ ಹಾಗೂ ಧಾರ್ಮಿಕ ಸಭೆ ಡಿ. 13 ರಂದು ಶ್ರೀ ಕ್ಷೇತ್ರ ನೆಲ್ಲಿಯಲ್ಲಿ ನಡೆಯಲಿದೆ.
ಅದೇ ದಿನ ರಾತ್ರಿ 7:30ಕ್ಕೆ ಶ್ರೀ ಕ್ಷೇತ್ರ ನೆಲ್ಲಿಯ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ನಡೆಯಲಿದೆ. ಈ ಬಿಡುಗಡೆ ಸಮಾರಂಭದಲ್ಲಿ ಶ್ರೀಧಾಮ ಮಾಣಿಲಾ ಬಂಟ್ವಾಳದ ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರ್ಗಾನದ ಕ್ರಿಯೇಟಿವ್ ವಿದ್ಯಾಸಂಸ್ಥೆಯ ಸಹಸ ಸಂಸ್ಥಾಪಕರಾದ ಡಾ. ಗಣನಾಥ್ ಶೆಟ್ಟಿ, ಕಾರ್ಕಳದ ಉದ್ಯಮಿಗಳಾದ ನಿತ್ಯಾನಂದ ಪೈ, ಮಂಗಳೂರು ವಿಶ್ವ ಹಿಂದೂ ಪರಿಷದ್ ವಿಭಾಗದ ಕಾರ್ಯದರ್ಶಿ ದೇವಿ ಪ್ರಸಾದ್ ಶೆಟ್ಟಿ, ಶ್ರೀ ಕ್ಷೇತ್ರ ನೆಲ್ಲಿಯ ಆಡಳಿತ ಮೊಕ್ತೇಸರರು ಸುನಿಲ್ ಕೆ. ಆರ್, ಉಡುಪಿ ಜಿಲ್ಲಾ ವಿಶ್ವ ಹಿಂದೂ ಪರಿಷದ್ ಸಹ ಕಾರ್ಯದರ್ಶಿ ಸುಧೀರ್ ನಿಟ್ಟೆ, ಹಾಗೂ ಕಾರ್ಕಳ ತಾಲೂಕು ಬಜರಂಗದಳದ ಸಂಯೋಜಕರಾದ ಮನೀಶ್ ನಿಟ್ಟೆ ಭಾಗವಹಿಸಲಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.
