Home ಸುದ್ದಿಗಳು ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡುವುದಕ್ಕೆ ಎಲ್ಲರಿಗೂ ಹಕ್ಕಿದೆ: ಸಿಎಂ ಸಿದ್ದರಾಮಯ್ಯ

ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡುವುದಕ್ಕೆ ಎಲ್ಲರಿಗೂ ಹಕ್ಕಿದೆ: ಸಿಎಂ ಸಿದ್ದರಾಮಯ್ಯ

0
ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡುವುದಕ್ಕೆ ಎಲ್ಲರಿಗೂ ಹಕ್ಕಿದೆ: ಸಿಎಂ ಸಿದ್ದರಾಮಯ್ಯ

ವಿಜಯಪುರ: ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡುವುದಕ್ಕೆ ಎಲ್ಲರಿಗೂ ಹಕ್ಕಿದೆ. ಬಿಜೆಪಿಯವರು ಪಂಚಮಸಾಲಿಗರಿಗೆ ಟೋಪಿ ಹಾಕಿ ಹೋಗಿದ್ದಾರೆ. ಇವರು 2ಎ ಕೇಳಿದ್ದರೆ, ಅವರು 2ಡಿ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಪ್ರತಿಭಟನೆಗೆ ಲಿಂಗಾಯ ಪಂಚಮಸಾಲಿ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಕರೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡುವುದಕ್ಕೆ ಎಲ್ಲರಿಗೂ ಹಕ್ಕಿದೆ, ಆದರೆ ಬಿಜೆಪಿಯವರು ಪಂಚಮಸಾಲಿಗರಿಗೆ ಟೋಪಿ ಹಾಕಿದ್ದಾರೆ ಎಂದರು.

ಪ್ರಜಾಪ್ರಭುತ್ವದಲ್ಲಿ ಹೋರಾಟಕ್ಕೆ ತಕರಾರು ಇಲ್ಲ. ಸಂವಿಧಾನ ಪರವಾಗಿ ಹೋರಾಟ ಇರಬೇಕು. ಹೈಕೋರ್ಟ್‌ಗೆ ಅಪಡೇಟ್ ಹಾಕಿದವರು ಯಾರು? ಇದೆಲ್ಲ ಮಾಡಿದ್ದು ಬಿಜೆಪಿ ಸರ್ಕಾರದವರು ಎಂದು ಹರಿಹಾಯ್ದರು.

ಟ್ರ್ಯಾಕ್ಟರ್‌ ತೆಗೆದುಕೊಂಡು ಹೋರಾಟ ಮಾಡುತ್ತೀವಿ ಎಂದರು. ಆಗ ಕೋರ್ಟ್ ಶಾಂತಿಯುತವಾಗಿ ಮಾಡುವುದಕ್ಕೆ ಹೇಳಿತ್ತು. ಆದರೂ ಕಾನೂನು ಕೈಗೆ ತೆಗೆದುಕೊಂಡರು. ನಾನು ಮೂರು ಜನ ಮಂತ್ರಿಗಳನ್ನು ಕಳಿಸಿದ್ದೆ. ಮಂತ್ರಿಗಳು ಕರೆದಾಗ ಅವರು ಸಿಎಂಗೆ ಮಾತಾಡಿಸುತ್ತೇವೆ ಎಂದರು. ಆದರೆ ನಾನು ಎಲ್ಲ ಕಡೆಗೂ ಹೋಗುವುದಕ್ಕೆ ಆಗುವುದಿಲ್ಲ. ಆದರೂ ನಾನು ಅವರನ್ನು ಮಾತನಾಡಿಸಲು ಕರೆದರೂ ಅವರು ಬರಲಿಲ್ಲ.

ಆಗ ಸುವರ್ಣಸೌಧಕ್ಕೆ ನುಗ್ಗಲು ಯತ್ನ ಮಾಡಿದರು. ಕಲ್ಲು ತೂರಾಟ ಮಾಡಿದರು, ಪೊಲೀಸರಿಗೆ ಗಾಯಗೊಂಡಿದ್ದಾರೆ. ನಮ್ಮ ಬಳಿ ಪ್ರೂಫ್ ಇವೆ, ಫೋಟೋ ಬೇಕಾದರೂ ತೋರಿಸುತ್ತೇನೆ. ಕಾನೂನು ಕೈಗೆ ತೆಗೆದುಕೊಂಡರೆ ಸರ್ಕಾರ ಸುಮ್ಮನಿರಲ್ಲ. ಶಾಂತಿಯುತವಾಗಿ ಹೋರಾಟ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.

 

LEAVE A REPLY

Please enter your comment!
Please enter your name here