Home ಸುದ್ದಿಗಳು ಮಲ್ಪೆ ಮೀನುಗಾರಿಕೆ ಕಚೇರಿಯ ಮೀಟಿಂಗ್‌ ರೂಮ್‌ಗೆ ಬೆಂಕಿ: ಕಡತಗಳು ಸುಟ್ಟು ಭಸ್ಮ

ಮಲ್ಪೆ ಮೀನುಗಾರಿಕೆ ಕಚೇರಿಯ ಮೀಟಿಂಗ್‌ ರೂಮ್‌ಗೆ ಬೆಂಕಿ: ಕಡತಗಳು ಸುಟ್ಟು ಭಸ್ಮ

0
ಮಲ್ಪೆ ಮೀನುಗಾರಿಕೆ ಕಚೇರಿಯ ಮೀಟಿಂಗ್‌ ರೂಮ್‌ಗೆ ಬೆಂಕಿ: ಕಡತಗಳು ಸುಟ್ಟು ಭಸ್ಮ

ಮಲ್ಪೆ: ಮಲ್ಪೆ ಮೀನುಗಾರಿಕೆ ಇಲಾಖೆಯ ಕಚೇರಿಯ ಮೀಟಿಂಗ್‌ ರೂಮ್‌ನಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್‌ ಉಂಟಾಗಿ ರೂಮ್‌ ಸಂಪೂರ್ಣ ಸುಟ್ಟು ಹೋದ ಘಟನೆ ನಡೆದಿದ್ದು, ಬೆಳಗ್ಗೆ ಕಚೇರಿ ತೆರೆದಾಗಲೇ ವಿಷಯ ಬೆಳಕಿಗೆ ಬಂದಿದೆ.

ರೂಮ್‌ನೊಳಗಿದ್ದ ಹವಾನಿಯಂತ್ರಕ ಯಂತ್ರ ಸ್ಫೋಟಗೊಂಡಿದ್ದು, ರೂಮ್‌ನ ಒಳಗಿದ್ದ ಎಲ್ಲ ಕಡತಗಳು ಸುಟ್ಟು ಬೂದಿಯಾಗಿದೆ. ಫ್ಯಾನ್‌, ಚಯರ್‌, ಟೇಬಲ್‌, ಲೈಫ್‌ಬಾಯ್‌, ಲೈಫ್ಜಾಕೆಟ್‌, ಸೇರಿದಂತೆ ಪಾರ್ಟಿಶನ್‌ ಗೋಡೆ ಸಂಪೂರ್ಣ ಹಾನಿಯಾಗಿದೆ.

ಬೆಂಕಿ ಇತರ ಕೋಣೆಯನ್ನು ಆವರಿಸಿದರೆ ಈ ಕಟ್ಟಡ ಪೂರ್ತಿ ಬೆಂಕಿಗಾಹುತಿಯಾಗುತ್ತಿತ್ತು ಎನ್ನಲಾಗಿದೆ. ಉರಿಯುತ್ತಿದ್ದ ಅವಶೇಷಗಳನ್ನು ಅಗ್ನಿಶಾಮಕ ದಳದವರು ಬಂದು ನಂದಿಸಿದ್ದಾರೆ.

ಸುಮಾರು 4 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಮಲ್ಪೆ ಠಾಣೆಗೆ ದೂರು ನೀಡಲಾಗಿದೆ.

 

LEAVE A REPLY

Please enter your comment!
Please enter your name here