Home ಸುದ್ದಿಗಳು 12 ಗಂಟೆ ತಡವಾಗಿ ಹಾರಾಟ ನಡೆಸಿದ ಮಂಗಳೂರು ಅಬುಧಾಬಿ ವಿಮಾನ

12 ಗಂಟೆ ತಡವಾಗಿ ಹಾರಾಟ ನಡೆಸಿದ ಮಂಗಳೂರು ಅಬುಧಾಬಿ ವಿಮಾನ

0
12 ಗಂಟೆ ತಡವಾಗಿ ಹಾರಾಟ ನಡೆಸಿದ ಮಂಗಳೂರು ಅಬುಧಾಬಿ ವಿಮಾನ

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಿಂದ ಅಬುಧಾಬಿಗೆ ಪ್ರಯಾಣಿಸಬೇಕಿದ್ದ ಏರ್‌ಇಂಡಿಯಾ ವಿಮಾನ 12 ಗಂಟೆ ತಡವಾಗಿ ಹಾರಾಟ ನಡೆಸಿದ ಘಟನೆ ನಡೆದಿದೆ.

ಸೋಮವಾರ ರಾತ್ರಿ ಮಂಗಳೂರಿಗೆ ಆಗಮಿಸಲಿದ್ದ ಈ ವಿಮಾನವು ರಾತ್ರಿ 8.55ಕ್ಕೆ ಅಬುಧಾಬಿಗೆ ತೆರಳಬೇಕಿತ್ತು. ಆದರೆ ಈ ವಿಮಾನ ಮಂಗಳೂರಿಗೆ ಆಗಮಿಸುವಾಗಲೇ ತಡವಾಗಿತ್ತು.

ಬಳಿಕ ತಾಂತ್ರಿಕ ಸಮಸ್ಯೆಯ ಕಾರಣದಿಂದಾಗಿ ವಿಮಾನ ನಿಗದಿತ ಸಮಯಕ್ಕೆ ಹಾರಾಟ ನಡೆಸಲಿಲ್ಲ. ಅನಂತರ ರಾತ್ರಿ 1 ಗಂಟೆ, ಮಧ್ಯರಾತ್ರಿ 3 ಗಂಟೆಗೆ ವಿಮಾನ ಹೊರಡಲಿದೆ ಎಂದು ತಿಳಿಸಿದರಾದರೂ ಆಗಲೂ ಸಂಚಾರ ನಡೆಸಲು ಸಾಧ್ಯವಾಗಿಲ್ಲ.

ಅಂತಿಮವಾಗಿ ಮಂಗಳವಾರ ಬೆಳಗ್ಗೆ ಸುಮಾರು 8.45ರ ಸುಮಾರಿಗೆ ಅಬುಧಾಬಿಗೆ ತೆರಳಿತು.

ವಿಮಾನಯಾನ ವಿಳಂಬದಿಂದಾಗಿ ನಿಲ್ದಾಣದಲ್ಲಿ ಬಾಕಿಯಾಗಿದ್ದ ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಯಿತು ಎಂದು ಕೆಲವು ಪ್ರಯಾಣಿಕರು ಆರೋಪಿಸಿದರು.

 

LEAVE A REPLY

Please enter your comment!
Please enter your name here