Home ಸುದ್ದಿಗಳು ಬಂಟ್ವಾಳ: ಅಕ್ರಮವಾಗಿ ಜುಗಾರಿ ಆಟ ಆಡುತ್ತಿದ್ದ 33 ಆರೋಪಿಗಳ ಬಂಧನ

ಬಂಟ್ವಾಳ: ಅಕ್ರಮವಾಗಿ ಜುಗಾರಿ ಆಟ ಆಡುತ್ತಿದ್ದ 33 ಆರೋಪಿಗಳ ಬಂಧನ

0
ಬಂಟ್ವಾಳ: ಅಕ್ರಮವಾಗಿ ಜುಗಾರಿ ಆಟ ಆಡುತ್ತಿದ್ದ 33 ಆರೋಪಿಗಳ ಬಂಧನ

ಬಂಟ್ವಾಳ: ಮನೆಯೊಂದರಲ್ಲಿ ಅಕ್ರಮವಾಗಿ ಜುಗಾರಿ ಆಟದಲ್ಲಿ ತೊಡಗಿದ್ದ 33 ಆರೋಪಿಗಳನ್ನು ಪೊಲೀಸರು ಬಡಗಬೆಳ್ಳೂರು ಎಂಬಲ್ಲಿ ಬಂಧಿಸಿದ ಘಟನೆ ನಡೆದಿದೆ.

ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಬಡಗಬೆಳ್ಳೂರು ಎಂಬಲ್ಲಿನ ಆರ್.ಸಿ.ಸಿ. ಮನೆಯೊಂದರಲ್ಲಿ ಟೇಬಲ್‌ ಸುತ್ತ ಕುಳಿತು ಇಸ್ಪೀಟ್‌ ಎಲೆಗಳನ್ನು ಬಳಸಿ “ಉಲಾಯಿ-ಪಿದಾಯಿ” ಜುಗಾರಿ ಆಟ ಆಡುತ್ತಿದ್ದರು.

ಬಂಧಿತರಿಂದ ಇಸ್ಪೀಟ್‌ ಎಲೆಗಳು, 3 ಸ್ಟೀಲ್‌ ಟೇಬಲ್‌, 10 ಪ್ಲಾಸ್ಟಿಕ್‌ ಚೆಯರ್‌ ಗಳು, ಟೇಬಲ್‌ ಮೇಲೆ ಹಾಸಿದ್ದ ಬಟ್ಟೆ ಇವುಗಳು ಸೇರಿದಂತೆ ಬಂಧಿತರಿಂದ ನಗದು ಸಹಿತ 7,90,220/- ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎ.ಸಿ.ಜೆ. & ಜೆ.ಎಂ.ಎಫ್.‌ ಸಿ. ನ್ಯಾಯಾಲಯ, ಬಂಟ್ವಾಳ ಇದರ ಡಿಸ್‌ ನಂ: 1770 /2024 ರ ಆದೇಶದಂತೆ ಪ್ರಕರಣ ದಾಖಲಾಗಿದೆ.

 

LEAVE A REPLY

Please enter your comment!
Please enter your name here