Home ಸುದ್ದಿಗಳು ಗ್ರಾಮ ಸಹಾಯಕಿಗೆ ಮಾನಸಿಕ ಕಿರುಕುಳ: ಆರೋಪಿಗಳಿಗೆ ನಿರೀಕ್ಷಣ ಜಾಮೀನು ಮಂಜೂರು

ಗ್ರಾಮ ಸಹಾಯಕಿಗೆ ಮಾನಸಿಕ ಕಿರುಕುಳ: ಆರೋಪಿಗಳಿಗೆ ನಿರೀಕ್ಷಣ ಜಾಮೀನು ಮಂಜೂರು

0
ಗ್ರಾಮ ಸಹಾಯಕಿಗೆ ಮಾನಸಿಕ ಕಿರುಕುಳ: ಆರೋಪಿಗಳಿಗೆ ನಿರೀಕ್ಷಣ ಜಾಮೀನು ಮಂಜೂರು

ಕುಂದಾಪುರ: ಗ್ರಾಮ ಪಂಚಾಯತ್‌ನ ಗ್ರಾಮ ಸಹಾಯಕಿಗೆ ಮಾನಸಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿದ್ದವರಿಗೆ ಸತ್ರ ನ್ಯಾಯಾಲಯ ಷರತ್ತು ಬದ್ಧ ನಿರೀಕ್ಷಣ ಜಾಮೀನು ಮಂಜೂರು ಮಾಡಿದೆ.

ಗ್ರಾಮ ಸಹಾಯಕಿ ಸುಶೀಲಾ ಅವರಿಗೆ ಮಾನಸಿಕ ಕಿರುಕುಳ ನೀಡಿದ್ದರು ಎಂದು ದೂರಲಾಗಿತ್ತು.

ಜಯಶೀಲ ಶೆಟ್ಟಿ, ರಾಘವೇಂದ್ರ ಮರಕಾಲ, ಬಿ. ಕರುಣಾಕರ ಶೆಟ್ಟಿ ಬೇಳೂರು, ದಿನಕರ ಶೆಟ್ಟಿ ಮೊಗೆಬೆಟ್ಟು, ಸುರೇಶ್‌, ಕೃಷ್ಣಯ್ಯ, ರಾಜಗೋಪಾಲ ಅಡಿಗ, ಅಶೋಕ್‌ ಕುಮಾರ್‌ ಶೆಟ್ಟಿ, ನವೀನ್‌ ಚಂದ್ರ ಶೆಟ್ಟಿ, ರವಿ ಮುಳ್ಳುಗುಡ್ಡೆ, ಪ್ರವೀಣ ಶೆಟ್ಟಿ, ರಾಜೇಂದ್ರ ಶೆಟ್ಟಿ, ಸೀತಾರಾಮ ಶೆಟ್ಟಿ, ರವಿರಾಜ್‌ ದೇವಾಡಿಗ ಮತ್ತು ಶಶಿಧರ ಶೆಟ್ಟಿ ಅವರ ವಿರುದ್ಧ ಗ್ರಾಮ ಸಹಾಯಕಿ ಕೋಟ ಪೊಲೀಸರಿಗೆ ದೂರು ನೀಡಿದ್ದರು.

ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಆರೋಪಿಗಳ ಪರ ವಕೀಲರಾದ ಮಲ್ಯಾಡಿ ಜಯರಾಮ ಶೆಟ್ಟಿ ಹಾಗೂ ಸಂತ್ರಸ್ತೆ ಪರ ಬಿ. ಅವಿನಾಶ್‌ ಶೆಟ್ಟಿ ವಾದಿಸಿದ್ದರು.

 

LEAVE A REPLY

Please enter your comment!
Please enter your name here