
ಉಡುಪಿ: ಇನ್‌ಸ್ಟಾಗ್ರಾಮ್ ಖಾತೆಗೆ ಬಂದ ಲಿಂಕ್ ಒತ್ತಿ ಯುವತಿಯೋರ್ವಳು 12.46 ಲಕ್ಷ ರೂ. ಹಣ ಕಳೆದುಕೊಂಡ ಘಟನೆ ನಡೆದಿದೆ.
ಶಿವಳ್ಳಿ ಗ್ರಾಮದ ಸಪ್ನ (28) ವಂಚನೆಗೆ ಒಳಗಾದವರು.
ಯುವತಿ ಖಾತೆಗೆ ವರ್ಕ್ ಫ್ರಮ್ ಹೋಮ್ ಎಂದು ಲಿಂಕ್ ಬಂದಿದ್ದು, ಅದನ್ನವರು ಓಪನ್ ಮಾಡಿದಾಗ ಅದರ ಪ್ಲಾಟ್‌ಫಾರ್ಮ್ನಲ್ಲಿ ಆರಂಭದಲ್ಲಿ 200 ರೂ. ಹೂಡಿಕೆ ಮಾಡಲು ಹೇಳಿದ್ದರು.
ಅದಕ್ಕೆ 50ರೂ. ಕಮಿಷನ್ ದೊರಕಿದೆ. ಇದನ್ನು ನಂಬಿದ ಯುವತಿ ಹೆಚ್ಚಿನ ಕಮಿಷನ್ ಬರುವುದಾಗಿ ನಂಬಿ ಡಿ.9ರಿಂದ ಡಿ.28ರ ನಡುವಿನ ಅವಧಿಯಲ್ಲಿ ಅಪರಿಚಿತರು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಫೋಪ್ ಪೇ, ಪೇಟಿಎಂ ಹಾಗೂ ಕ್ಯಾಶ್ ಡೆಪಾಸಿಟ್ ಮೂಲಕ ಒಟ್ಟು 12,46,000 ರೂ. ಹಣವನ್ನು ಹೂಡಿಕೆ ಮಾಡಿದ್ದಾರೆ.
ನಂತರ ಹಣ ವಾಪಾಸ್ ಕೇಳಿದಾಗ ಮೋಸ ಹೋಗಿರುವುದು ಗೊತ್ತಾಗಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
