
ಹೆಬ್ರಿ: ಹೆಬ್ರಿ ಕಡೆ ಬರುತ್ತಿದ್ದ ಬೈಕೊಂದಕ್ಕೆ ಎದುರುಗಡೆಯಿಂದ ಬಂದ ಕಾರು ಢಿಕ್ಕಿ ಹೊಡೆದ ಘಟನೆ ಶಿವಪುರ ಗ್ರಾಮದ ರಾಂಪುರದಲ್ಲಿ ನಡೆದಿದೆ.
ಈ ಅಪಘಾತದಲ್ಲಿ ಶಿವಪುರ ಮೂರ್ಸಾಲು ನಿವಾಸಿ ರಾಹುಲ್ (25) ಮೃತಪಟ್ಟಿದ್ದಾರೆ.
ಎದುರುಗಡೆಯಿಂದ ಸ್ವಿಪ್ಟ್ ಕಾರಿನ ಚಾಲಕ ಅರುಣ್ ಅತೀ ವೇಗವಾಗಿ ಮತ್ತು ಅಜಾರೂಕತೆಯಿಂದ ರಸ್ತೆಯ ತೀರ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲ್‌ಗೆ ಎದುರಿನಿಂದ ಢಿಕ್ಕಿ ಹೊಡೆದಿದೆ.
ಪರಿಣಾಮ ಮೋಟಾರ್ ಸೈಕಲ್ ಸವಾರ ರಸ್ತೆಗೆ ಬಿದ್ದಿದ್ದು, ಅವರಿಗೆ ತೀವ್ರ ಸ್ವರೂಪದ ಗಾಯವಾಗಿತ್ತು. ಅವರನ್ನು ಹೆಬ್ರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸ್ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
