Home ಸುದ್ದಿಗಳು ವೈಯಕ್ತಿಕ ಖಾತೆಯ ಕ್ಯು ಆರ್‌ ಕೋಡ್‌ ಹಾಕಿ ಪೆಟ್ರೋಲ್‌ ಬಂಕ್‌ಗೆ ಲಕ್ಷಾಂತರ ರೂ. ವಂಚನೆ

ವೈಯಕ್ತಿಕ ಖಾತೆಯ ಕ್ಯು ಆರ್‌ ಕೋಡ್‌ ಹಾಕಿ ಪೆಟ್ರೋಲ್‌ ಬಂಕ್‌ಗೆ ಲಕ್ಷಾಂತರ ರೂ. ವಂಚನೆ

0
ವೈಯಕ್ತಿಕ ಖಾತೆಯ ಕ್ಯು ಆರ್‌ ಕೋಡ್‌ ಹಾಕಿ ಪೆಟ್ರೋಲ್‌ ಬಂಕ್‌ಗೆ ಲಕ್ಷಾಂತರ ರೂ. ವಂಚನೆ

ಮಂಗಳೂರು: ಪೆಟ್ರೋಲ್‌ ಬಂಕ್‌ನಲ್ಲಿ ಕೆಲಸ ಮಾಡುತಿದ್ದ ಸೂಪರ್‌ವೈಸರ್‌ ತನ್ನ ವೈಯಕ್ತಿಕ ಖಾತೆಯ ಕ್ಯು ಆರ್‌ ಕೋಡ್‌ ಅನ್ನು ಹಾಕಿ ಬಂಕ್‌ಗೆ 58.85 ಲಕ್ಷ ರೂ. ವಂಚಿಸಿದ ಘಟನೆ ಬಂಗ್ರಕೂಳೂರಿನ ರಿಲಯನ್ಸ್‌ ಔಟ್‌ಲೆಟ್‌ ಫ್ಯುಯೆಲ್ ಬಂಕ್‌ನಲ್ಲಿ ನಡೆದಿದೆ.

ಆರೋಪಿಯನ್ನು ಮೋಹನದಾಸ್‌ ಎಂದು ಗುರುತಿಸಲಾಗಿದೆ.

ಈತ 2023ರ ಮಾ. 1ರಿಂದ ಜು. 31ರ ವರೆಗೆ ಪೆಟ್ರೋಲ್‌ ಬಂಕ್‌ನಲ್ಲಿ ಬಂಕ್‌ನ ಕ್ಯುಆರ್‌ ಕೋಡ್‌ ತೆಗೆದು ತನ್ನ ವೈಯಕ್ತಿಯ ಖಾತೆಯ ಕ್ಯುಆರ್‌ ಕೋಡ್‌ನ್ನು ಅಳವಡಿಸಿ ಗ್ರಾಹಕರಿಗೆ ಬಂಕ್‌ನದ್ದೇ ಕ್ಯುಆರ್‌ ಕೋಡ್‌ ಎಂದು ನಂಬಿಸಿ 58,85,333 ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾನೆ.

ರಿಲಯನ್ಸ್‌ ಔಟ್‌ಲೆಟ್‌ ಫ್ಯುಯೆಲ್ ಬಂಕ್‌ನ ಮ್ಯಾನೇಜರ್‌ ನಗರದ ಸೆನ್‌ ಪೊಲೀಸರಿಗೆ ದೂರು ನೀಡಿದ್ದಾರೆ.

 

LEAVE A REPLY

Please enter your comment!
Please enter your name here