
ವಾಷಿಂಗ್ಟನ್: ದಕ್ಷಿಣ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ಭೀಕರ ಕಾಡ್ಗಿಚ್ಚು ಹೊತ್ತಿಕೊಂಡಿದೆ.
ಸುಮಾರು 15,832 ಎಕರೆ ಪ್ರದೇಶಕ್ಕೆ ಬೆಂಕಿ ವ್ಯಾಪಿಸಿದ್ದು, 1,000 ಕಟ್ಟಡಗಳು ಬೆಂಕಿಗೆ ಆಹುತಿಯಾಗಿವೆ. ಕನಿಷ್ಠ 5 ಮಂದಿ ಸಜೀವ ದಹನವಾಗಿದ್ದಾರೆ. ಬೆಂಕಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಸುಮಾರು 1 ಲಕ್ಷ ಮಂದಿಯನ್ನು ಸ್ಥಳಾಂತರಿಸಲಾಗಿದೆ.
ಇನ್ನೂ ಕೆಲವೆಡೆ ಅಸಂಖ್ಯಾತ ಐಷಾರಾಮಿ ಮನೆಗಳು ಬೆಂಕಿ ಹೊತ್ತಿಕೊಳ್ಳುವ ಭೀತಿಯಲ್ಲಿವೆ ಎಂದು ವರದಿಗಳು ತಿಳಿಸಿವೆ.
ಇನ್ನೂ ಲಾಸ್ ಏಂಜಲೀಸ್‌ನಲ್ಲಿ ಹಬ್ಬಿದ ಕಾಡ್ಗಿಚ್ಚಿನಿಂದ ಸುಮಾರು 50 ಶತಕೋಟಿ ಡಾಲರ್ (42,000 ಕೋಟಿ ರೂ.) ಸಂಪತ್ತು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
