Home ಸುದ್ದಿಗಳು ಮಹಾಕುಂಭಮೇಳದಲ್ಲಿ 10 ಟೀ ಪಾಯಿಂಟ್ ತೆರೆಯಲಿರುವ ಕೆಎಂಎಫ್

ಮಹಾಕುಂಭಮೇಳದಲ್ಲಿ 10 ಟೀ ಪಾಯಿಂಟ್ ತೆರೆಯಲಿರುವ ಕೆಎಂಎಫ್

0
ಮಹಾಕುಂಭಮೇಳದಲ್ಲಿ 10 ಟೀ ಪಾಯಿಂಟ್ ತೆರೆಯಲಿರುವ ಕೆಎಂಎಫ್

ಪ್ರಯಾಗ್‌ರಾಜ್: ಮಹಾಕುಂಭಮೇಳದಲ್ಲಿ 10 ಟೀ ಪಾಯಿಂಟ್ (Tea Point) ತೆರೆಯಲು ಕೆಎಂಎಫ್  ಒಪ್ಪಂದ ಮಾಡಿಕೊಂಡಿದೆ.

ಕೆಎಂಎಫ್ ಸಹಭಾಗಿತ್ವದಲ್ಲಿ 10 ಟೀ ಪಾಯಿಂಟ್ ತೆರೆಯಲು ಸಿದ್ಧತೆ ನಡೆಸಲಾಗಿದ್ದು, ಜೊತೆಗೆ ನಂದಿನಿ ಹಾಲಿನ ಬಳಕೆ ಹಾಗೂ ನಂದಿನಿ ಉತ್ಪನ್ನಗಳ ಮಾರಾಟ ನಡೆಯಲಿದೆ.

ಟೀ ಪಾಯಿಂಟ್‌ನಿಂದ ಸುಮಾರು ಒಂದು ಕೋಟಿ ಟೀ ಮಾರಾಟ ಮಾಡುವ ಗುರಿಯನ್ನು ಕೆಎಂಎಫ್ ಹಾಕಿಕೊಂಡಿದೆ. ಈ ಮೂಲಕ ಒಂದು ಮೇಳದಲ್ಲಿ ಅತೀ ಹೆಚ್ಚು ಟೀ ಮಾರಾಟ ಮಾಡಿದ ಸಂಸ್ಥೆಯೆಂದು ಗಿನ್ನಿಸ್ ದಾಖಲೆ ನಿರ್ಮಿಸುವ ಪ್ರಯತ್ನ ಮಾಡಲಿದೆ.

ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜ.13ರಿಂದ ಪ್ರಾರಂಭವಾಗಿರುವ ಮಾಹಕುಂಭಮೇಳ 44 ದಿನಗಳ ಕಾಲ ನಡೆಯಲಿದ್ದು, ಈ ಮೇಳದಲ್ಲಿ ನಂದಿನಿ ಹಾಲಿನ ಮೂಲಕ ಖ್ಯಾತಿ ಪಡೆದಿರುವ ಕೆಎಂಎಫ್ ತನ್ನ ಕೈ ಚಳಕ ತೋರಿಸಲಿದೆ.

 

LEAVE A REPLY

Please enter your comment!
Please enter your name here