Home ಸುದ್ದಿಗಳು ಕಾರವಾರದ ಬಳಿ ಕುಂದಾಪುರ ಮೂಲದ ಬೋಟ್‌ ಮುಳುಗಡೆ

ಕಾರವಾರದ ಬಳಿ ಕುಂದಾಪುರ ಮೂಲದ ಬೋಟ್‌ ಮುಳುಗಡೆ

0
ಕಾರವಾರದ ಬಳಿ ಕುಂದಾಪುರ ಮೂಲದ ಬೋಟ್‌ ಮುಳುಗಡೆ

ಉಡುಪಿ: ಕುಂದಾಪುರ ಮೂಲದ ಬೋಟ್‌ವೊಂದು ಕಾರವಾರದ ಬಳಿ ಮುಳುಗಡೆಯಾದ ಘಟನೆ

ಜ. 11ರಂದು ತಂಡೇಲ ಯೋಗೀಶ್‌ ರಾಮಕೃಷ್ಣ ಹರಿಕಾಂತ ಮತ್ತು 7 ಮಂದಿ ಕಲಾಸಿ ಜತೆ ಸೇರಿ ಮೀನುಗಾರಿಕೆಗಾಗಿ ರಾತ್ರಿ 10.30ಕ್ಕೆ ಮಲ್ಪೆ ಬಂದರಿನಿಂದ ನೇರ ಉತ್ತರ ದಿಕ್ಕಿಗೆ ಹೊರಟಿದ್ದು, ಜ. 12ರಂದು ರಾತ್ರಿ ಸುಮಾರು 11.45ರ ಹೊತ್ತಿಗೆ ಕಾರವಾರದ ಮುಂದೆ ಹೋಗುವಾಗ ಬೋಟಿನ ಕೆಳಭಾಗಕ್ಕೆ ಯಾವುದೋ ವಸ್ತು ತಾಗಿದಂತಾಗಿದೆ.

ಸ್ವಲ್ಪ ಹೊತ್ತಿನ ಬಳಿಕ ಬೋಟಿನ ಎದುರು ಬದಿಯ ಸ್ಟೋರೇಜ್‌ನಲ್ಲಿ ನೀರು ಒಳ ಬರಲು ಆರಂಭವಾಗಿದ್ದು, ನೀರು ಖಾಲಿ ಮಾಡಲು ಯತ್ನಿಸಿದರೂ ಸಾಧ್ಯವಾಗದೆ ಬೋಟ್‌ ಮುಳುಗಡೆಯಾಗಿದೆ.

ಬಳಿಕ ಹತ್ತಿರದಲ್ಲಿಯೇ ಇದ್ದ ಬೋಟಿನವರು ಸಹಾಯಕ್ಕೆ ಬಂದರೂ ಬೋಟ್‌ ಸಂಪೂರ್ಣ ಮುಳುಗಡೆಯಾಗಿ ಸುಮಾರು 70 ಲ.ರೂ. ನಷ್ಟ ಉಂಟಾಗಿದೆ ಎನ್ನಲಾಗಿದೆ.

ಗಂಗೊಳ್ಳಿಯ ಮೊಮಿನ್‌ ನಾಜಿಮಾ ಅವರಿಗೆ ಸೇರಿದ ಸೀ ಹಂಟರ್‌ ಹೆಸರಿನ ಮೀನುಗಾರಿಕೆ ಬೋಟ್‌ ಇದಾಗಿದ್ದು, ಯಾವುದೇ ಜೀವಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.

 

LEAVE A REPLY

Please enter your comment!
Please enter your name here