Home ಸುದ್ದಿಗಳು ಜ. 23ರಿಂದ 26ರ ವರೆಗೆ ಕದ್ರಿ ಪಾರ್ಕ್‌ನಲ್ಲಿ ಫಲಪುಷ್ಪ ಪ್ರದರ್ಶನ

ಜ. 23ರಿಂದ 26ರ ವರೆಗೆ ಕದ್ರಿ ಪಾರ್ಕ್‌ನಲ್ಲಿ ಫಲಪುಷ್ಪ ಪ್ರದರ್ಶನ

0
ಜ. 23ರಿಂದ 26ರ ವರೆಗೆ ಕದ್ರಿ ಪಾರ್ಕ್‌ನಲ್ಲಿ ಫಲಪುಷ್ಪ ಪ್ರದರ್ಶನ

ಮಂಗಳೂರು: ಜ. 23ರಿಂದ 26ರ ವರೆಗೆ ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ತೋಟಗಾರಿಕೆ ಇಲಾಖೆ ಹಾಗೂ ಕದ್ರಿ ಉದ್ಯಾನವನ ಅಭಿವೃದ್ದಿ ಸಮಿತಿ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ.

ಪ್ರದರ್ಶನಕ್ಕೆ ಬಹುತೇಕ ಸಿದ್ಧತೆಗಳು ಆರಂಭ ಗೊಂಡಿದ್ದು, ಪ್ರದರ್ಶನಕ್ಕೆ ಅಗತ್ಯವಾಗಿರುವ ವಿವಿಧ ಬಗೆಯ ಹೂವಿನ ಗಿಡಗಳನ್ನು ಬೆಳೆಸಲಾಗಿದೆ. ಯಕ್ಷಗಾನ, ಕಂಬಳ, ಮೀನುಗಾರಿಕೆ ಯನ್ನು ಸಿರಿಧಾನ್ಯ ಬಳಸಿ ವಿಭಿನ್ನವಾಗಿ ಚಿತ್ರಿಸುವುದು ಈ ಬಾರಿಯ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆ.

ಸಾಲ್ವಿಯ, ಸೇವಂತಿಗೆ, ಚೆಂಡು ಹೂ, ಜೀನಿಯಾ, ಡಯಾಂಥಸ್‌, ಆಸ್ಟರ್‌, ವಿಂಕಾ ರೋಸಿಯಾ, ಕಾಕ್ಸ್‌ ಕೋಂಬ್‌, ಡೇಲಿಯಾ, ಪೆಟೂನಿಯಾ, ಟೊರಿನೋ ಮುಂತಾದ ಹೂವುಗಳನ್ನು ಕುಂಡಗಳಲ್ಲಿ ಬೆಳೆಸಲಾಗಿದೆ. 20 ಸಾವಿರದಷ್ಟು 30 ಜಾತಿಯ ಹೂವುಗಳು ಜನಾಕರ್ಷಣೆಗೆ ತಯಾರಾಗುತ್ತಿವೆ.

ವಿವಿಧ ಅಲಂಕಾರಿಕ ಗಿಡಗಳು, ಬೋನ್ಸಾಯ್‌ ಗಿಡಗಳ ಪ್ರದರ್ಶನ, ಇಕೆಬಾನೆ ಹೂವಿನ ಜೋಡಣೆಯ ಪ್ರದರ್ಶಗಳನ್ನು ಆಯೋಜಿಸಲಾಗಿದೆ.

ರೈತರು ಬೆಳೆದಿರುವಂತಹ ವಿಶಿಷ್ಠ ಬಗೆಯ ಹಣ್ಣು, ತರಕಾರಿ, ತೋಟದ ಬೆಳೆಗಳು, ಸಾಂಬಾರ ಬೆಳೆಗಳ ಪ್ರದರ್ಶಿಕೆಗಳು, ತೋಟಗಾರಿಕೆ ಕರಕುಶ ಲತೆಗಳು, ಸಾರ್ವಜನಿಕರು ಬೆಳೆಸಿರುವ ಬೊನ್ಸಾಯಿ, ಆಂಥೋರಿಯಂ ಗಿಡಗಳು, ಇತರೇ ಆಕರ್ಷಣೀಯ ವಾದ ಗಿಡಗಳನ್ನು ಪ್ರದರ್ಶಿಸಲು ಉದ್ದೇಶಿಸಲಾಗಿದೆ.

ಬಣ್ಣ ಬಣ್ಣದ ಹೂವುಗಳನ್ನು ಬಳಸಿಕೊಂಡು ವಿವಿಧ ಆಕೃತಿಗಳು ರಚಿಸಲು ಮುಂದಾಗಿದ್ದು, ಇದರಲ್ಲಿ ಫ್ರಾನ್ಸ್‌ ದೇಶದ ಐಫೆಲ್‌ ಟವರ್‌ ಗಮನ ಸೆಳೆಯಲಿದೆ.

 

LEAVE A REPLY

Please enter your comment!
Please enter your name here