
ಮೂಲ್ಕಿ: ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ಹಾಗೂ ಸಾಗಾಟಕ್ಕೆ ಸಂಬಂಧಿಸಿ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಒಟ್ಟು 88 ಪ್ರಕರಣಗಳಲ್ಲಿ 37 ಪ್ರಕರಣಗಳಿಗೆ ಸಂಬಂಧಿಸಿದ 6.80 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ನಾಶಪಡಿಸಲಾಯಿತು.
ನ್ಯಾಯಾಲಯದ ಅನುಮತಿ ಪಡೆದು ಮೂಲ್ಕಿಯ ಕೊಲಾಡು ರೀಸಸ್ಸ್ಟೆಬಿಲಿಟಿ ಹೆಲ್ತ್ಕೇರ್ ಸೊಲ್ಯೂಶನ್ಸ್ನಲ್ಲಿ ಸುಟ್ಟು ನಾಶಪಡಿಸಲಾಗಿದೆ ಎಂದು ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದರು.
ಮಂಗಳೂರು ನಗರ ವ್ಯಾಪ್ತಿಯ 13 ಠಾಣೆಗಳಿಗೆ ಸಂಬಂಧಿಸಿ ವಿಲೇವಾರಿ ಮಾಡಲಾಗಿರುವ ಮಾದಕ ವಸ್ತುಗಳಲ್ಲಿ ಗಾಂಜಾ 335 ಕಿಲೋ 460 ಗ್ರಾಂ ಮೌಲ್ಯ 75,00,508 ರೂ. ಹಾಗೂ ಎಂಡಿಎಂಎ 7 ಕಿಲೋ 640 ಗ್ರಾಂ ಮೌಲ್ಯ 6,03,65,050 ರೂ. ಮತ್ತು ಕೊಕೇನ್ 16 ಗ್ರಾಂ ಆಗಿದೆ.
ವೀಸಾ ಅವಧಿ ಮುಗಿದಿದ್ದರೂ ಅನಾವಶ್ಯಕವಾಗಿ ನಮ್ಮ ದೇಶದಲ್ಲಿ ನೆಲೆಸಿರುವ ವಿವಿಧ ದೇಶಗಳ ಪ್ರಜೆಗಳು ಕೂಡ ಮಾದಕ ವಸ್ತು ದಂಧೆಯಲ್ಲಿ ತೊಡಗಿಕೊಂಡಿದ್ದಾರೆ. ಅವರ ಬಂಧನ ಕಾರ್ಯ ಹಂತ-ಹಂತವಾಗಿ ನಡೆಯುತ್ತಿದೆ ಎಂದರು.
