
ಉಡುಪಿ: ಕರ್ನಾಟಕ ಕರಾವಳಿಗೆ ಅನ್ವಯಿಸುವಂತೆ ದೇಶಾದ್ಯಂತ ಮೀನುಗಾರಿಕೆಗೆ ಏಕರೂಪ ನೀತಿ ತರುವ ನಿಟ್ಟಿನಲ್ಲಿ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಚರ್ಚೆ ಆರಂಭಿಸಿದ್ದಾರೆ.
ನಾಡದೋಣಿ ಮೀನುಗಾರಿಕೆ ಉಡುಪಿ ಜಿಲ್ಲೆಯಲ್ಲಿ ಬೈಂದೂರು, ಕುಂದಾಪುರ ತಾಲೂಕಿನಲ್ಲಿ ಪ್ರಧಾನವಾಗಿದೆ. ಪರ್ಷಿನ್ ಹಾಗೂ ಡೀಪ್ ಫಿಶಿಂಗ್ ಬೋಟ್‌ಗಳು ಮಲ್ಪೆ, ಗಂಗೊಳ್ಳಿ, ಭಟ್ಕಳ ಹಾಗೂ ಮಂಗಳೂರಿನಲ್ಲಿ ಹೆಚ್ಚಿವೆ. ಮೂರು ಜಿಲ್ಲೆಗಳಲ್ಲಿ 3,456 ಯಾಂತ್ರಿಕೃತ ಬೋಟುಗಳು ಹಾಗೂ 8,657 ಸಾಂಪ್ರದಾಯಿಕ ಮೀನುಗಾರಿಕೆ ದೋಣಿಗಳಿವೆ(ನಾಡದೋಣಿ).
ಆಳ ಸಮುದ್ರದಲ್ಲಿ ಫಿಶಿಂಗ್ ಬೋಟ್ ಮೀನುಗಾರಿಕೆ ಇರಲಿದ್ದು, ಇವುಗಳು ಒಮ್ಮೆ ಸಮುದ್ರಕ್ಕೆ ಹೋದರೆ 10-12 ದಿನಗಳ ಬಳಿಕ ದಕ್ಕೆಗೆ ಮರಳುವುದು. ಉಳಿದೆರೆಡು ರೀತಿಯ ಮೀನುಗಾರಿಕೆ ಬೋಟುಗಳು ನಿತ್ಯ ಹೋಗಿ ಬರುವುದು.
ಸಾಂಪ್ರದಾಯಿಕ ಮೀನುಗಾರಿಕೆ ದೋಣಿಗಳು ಕಡಲ ತೀರದಲ್ಲಿ ಭಾಗದಲ್ಲಿ ಮೀನುಗಾರಿಕೆ ಮಾಡುವುದಾಗಿದ್ದು, ಆಳ ಸಮುದ್ರಕ್ಕೆ ಹೋಗುವುದಿಲ್ಲ.
ಒಂದು ಜಿಲ್ಲೆಯ ಮೀನುಗಾರಿಕೆ ದೋಣಿಗಳ ಸಂಘದವರು ನಿರ್ಣಯಿಸಿ ಬುಲ್‌ಟ್ರಾಲ್ ನಿಲ್ಲಿಸಿದರೆ ಉಳಿದೆರೆದು ಜಿಲ್ಲೆಗಳಲ್ಲೂ ಬುಲ್‌ಟ್ರಾಲ್ ನಿಲ್ಲಿಸಬೇಕಾಗುತ್ತದೆ. ರಾಜ್ಯದೊಳಗೆ ಗಡಿ ಇಲ್ಲದೆ ಇರುವುದರಿಂದ ಅಲ್ಲಿನವರು ಇಲ್ಲಿಗೆ, ಇಲ್ಲಿನವರು ಅಲ್ಲಿಗೆ ಹೋಗುವುದು ನಡೆಯುತ್ತದೆ.
ಲೈಟ್ ಹಾಕಿ ಮೀನು ಹಿಡಿಯುವುದು ನಾಡದೋಣಿ ಮೀನುಗಾರಿಕೆ ಮೇಲೆ ಹೆಚ್ಚು ಪರಿಣಾಮ ಬೀರುತ್ತಿರುವುದರಿಂದ ನಿಷೇಧಿತ ಅಸ್ವಾಭಾವಿಕ ಮೀನುಗಾರಿಕೆ ಪದ್ಧತಿಯನ್ನು ರದ್ದು ಮಾಡಬೇಕು ಎಂಬುದು ನಾಡದೋಣಿ ಮೀನುಗಾರರ ಆಗ್ರಹವಾಗಿದೆ.
