
ಉಡುಪಿ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ತೀರ್ಥಸ್ನಾನ ಮಾಡಿದರು.
ಶ್ರೀಪಾದರು ಶಿಷ್ಯವರ್ಗದೊಂದಿಗೆ ಮಹಾಕುಂಭ ಮೇಳದಲ್ಲಿ ಭಾಗವಹಿಸಿದ್ದಾರೆ. ಅವರು ಸುಮಾರು 1 ತಿಂಗಳು ಅಲ್ಲಿದ್ದು, ಪ್ರವಚನ ನಡೆಸಲಿದ್ದಾರೆ. ಗಂಗಾನದಿ ತಟದಲ್ಲಿ ಹಾಕಿರುವ ಟೆಂಟ್‌ನಲ್ಲಿ ಶ್ರೀಪಾದರು ಮೊಕ್ಕಾಂ ಹೂಡಿದ್ದಾರೆ.
ಜ.24ರಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮಹಾಕುಂಭಮೇಳದಲ್ಲಿ ಭಾಗವಹಿಸುವ ಸಾಧ್ಯತೆಯಿದೆ ಎಂದು ಮಠದ ಮೂಲಗಳು ತಿಳಿಸಿವೆ.
