Home ಸುದ್ದಿಗಳು ಜ.18,19ರಂದು ತಣ್ಣೀರುಬಾವಿ ಬೀಚ್‌ನಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ

ಜ.18,19ರಂದು ತಣ್ಣೀರುಬಾವಿ ಬೀಚ್‌ನಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ

0
ಜ.18,19ರಂದು ತಣ್ಣೀರುಬಾವಿ ಬೀಚ್‌ನಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ

ಮಂಗಳೂರು: ಜ.18 ಮತ್ತು 19ರಂದು ತಣ್ಣೀರುಬಾವಿ ಬೀಚ್‌ನಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಟೀಮ್‌ ಮಂಗಳೂರು ವತಿಯಿಂದ ಜಿಲ್ಲಾಡಳಿತ ಸಹಕಾರದೊಂದಿಗೆ ನಡೆಯುತ್ತಿರುವ ಈ ಗಾಳಿಪಟ ಉತ್ಸವದಲ್ಲಿ ವಿದೇಶದ ಕೆಲವು ತಂಡಗಳು ಈಗಾಗಲೇ ಆಗಮಿಸಿದ್ದು, ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ ಎಂದರು.

ಮಂಗಳೂರಿನಲ್ಲಿ ನಡೆಯುವ 8ನೇ ವರ್ಷದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಇದಾಗಿದ್ದು, ಇಂಗ್ಲೆಂಡ್‌, ಜರ್ಮನಿ, ನೆದರ್‌ಲ್ಯಾಂಡ್‌, ಸ್ಲೋವೆನಿಯಾ, ಇಟಲಿ, ಇನ್ಪೊನಿಯ, ಸ್ವೀಡನ್‌, ಇಂಡೋನೇಶಿಯಾ, ಪೋರ್ಚುಗಲ್‌ ಮುಂತಾದ ದೇಶಗಳ ತಂಡಗಳು, ಒಡಿಸ್ಸಾ, ರಾಜಸ್ಥಾನ, ಮಹಾರಾಷ್ಟ್ರ, ತೆಲಂಗಾಣ, ಕೇರಳ, ಗುಜರಾತ್‌ ಮುಂತಾದ ರಾಜ್ಯ ಮಟ್ಟದ ತಂಡಗಳು ಭಾಗವಹಿಸಲಿವೆ ಎಂದು ತಿಳಿಸಿದರು.

ಟೀಂ ಮಂಗಳೂರಿನ ಪ್ರಶಾಂತ್‌ ಉಪಾಧ್ಯಾಯ ಮಾತನಾಡಿ, “ಒಂದೇ ಆಕಾಶ, ಒಂದೇ ಭೂಮಿ, ಒಂದೇ ಕುಟುಂಬ’ ಎಂಬ ಧ್ಯೇಯ ವಾಕ್ಯದಲ್ಲಿ ಉತ್ಸವ ಜರಗಲಿದ್ದು, ದೇಶ-ದೇಶಗಳ ನಡುವಿನ ಸಂಸ್ಕೃತಿಯನ್ನು ಬೆಸೆಯುವ ಉದ್ದೇಶ ಹೊಂದಲಾಗಿದೆ.

ಜ.18 ಮತ್ತು 19ರಂದು ಸಂಜೆ ಗಂಟೆ 3ರಿಂದ ರಾತ್ರಿ 9ರ ವರೆಗೆ ಗಾಳಿಪಟ ಉತ್ಸವ ನಡೆಯಲಿದ್ದು, ಜ.18ರಂದು ಸಂಜೆ 4 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಉಪಸ್ಥಿತಿಯಲ್ಲಿ ಚಾಲನೆ ಸಿಗಲಿದೆ.

ಬಾನಿನಲ್ಲಿ ಜಿಗಿದಾಡುವ ಸ್ಟಂಟ್‌ ಗಾಳಿಪಟಗಳು, ಏರೋ ಫಾಯ್ಸ ಗಾಳಿಪಟಗಳು (ಗಾಳಿ ತುಂಬಿ ಬಲೂನ್‌ ರೀತಿಯಲ್ಲಿ ಹಾರಾಡುವ ಬೃಹತ್‌ ಗಾಳಿಪಟಗಳು) ಸೀರೀಸ್‌ ಕೈಟ್‌ (ಏಕದಾರದಲ್ಲಿ ನೂರಾರು ಗಾಳಿಪಟಗಳು) ರೆಕ್ಕೆ ಬಿಚ್ಚಿ ಹಕ್ಕಿಯಂತೆ ಹಾರಾಡುವ ಗಾಳಿಪಟಗಳು ಈ ಉತ್ಸವದಲ್ಲಿ ಜನರಿಗೆ ಮನರಂಜನೆ ನೀಡಲಿದೆ ಎಂದರು.

 

LEAVE A REPLY

Please enter your comment!
Please enter your name here