Home ಸುದ್ದಿಗಳು ಗಾಜಾದಲ್ಲಿ ಭಾನುವಾರದಿಂದ ಕದನ ವಿರಾಮ ಜಾರಿ: 95 ಪ್ಯಾಲೆಸ್ಟೀನಿಯನ್ನರ ಬಿಡುಗಡೆ

ಗಾಜಾದಲ್ಲಿ ಭಾನುವಾರದಿಂದ ಕದನ ವಿರಾಮ ಜಾರಿ: 95 ಪ್ಯಾಲೆಸ್ಟೀನಿಯನ್ನರ ಬಿಡುಗಡೆ

0
ಗಾಜಾದಲ್ಲಿ ಭಾನುವಾರದಿಂದ ಕದನ ವಿರಾಮ ಜಾರಿ: 95 ಪ್ಯಾಲೆಸ್ಟೀನಿಯನ್ನರ ಬಿಡುಗಡೆ

ಜೆರುಸಲೇಂ: ಈ ವಾರಾಂತ್ಯದಲ್ಲಿ ಇಸ್ರೇಲ್‌ ಗಾಜಾ ಕದನ ವಿರಾಮ ಜಾರಿಗೆ ಬರುತ್ತದೆಯೇ ಎಂಬ ಬಗ್ಗೆ ಇದ್ದ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ.

ಇಸ್ರೇಲ್‌ನ ಸಚಿವ ಸಂಪುಟ ಶನಿವಾರ ಗಾಜಾ ಕದನ ವಿರಾಮ ಮತ್ತು ಒತ್ತೆಯಾಳು ಬಿಡುಗಡೆ ಒಪ್ಪಂದವನ್ನು ಅನುಮೋದಿಸಲು ಮತ ಚಲಾಯಿಸಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ತಿಳಿಸಿದೆ.

ಕದನ ವಿರಾಮ ಭಾನುವಾರದಿಂದ ಪ್ರಾರಂಭವಾಗಲಿದ್ದು, ಇಸ್ರೇಲ್ ಜೈಲುಗಳಲ್ಲಿರುವ ನೂರಾರು ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಬಿಡುಗಡೆಯಾಗಲಿದ್ದಾರೆ.

ಸರ್ಕಾರದ ಅನುಮೋದನೆಗೆ ಒಳಪಟ್ಟು ಭಾನುವಾರದಿಂದ ಬಿಡುಗಡೆಯಾಗಲಿರುವ 95 ಪ್ಯಾಲೆಸ್ಟೀನಿಯನ್ನರ ಪಟ್ಟಿಯನ್ನು ನ್ಯಾಯ ಸಚಿವಾಲಯ ಪ್ರಕಟಿಸಿದೆ. ಅವರಲ್ಲಿ 69 ಮಹಿಳೆಯರು, 16 ಪುರುಷರು ಮತ್ತು 10 ಅಪ್ರಾಪ್ತರು ಸೇರಿದ್ದಾರೆ.

 

LEAVE A REPLY

Please enter your comment!
Please enter your name here