
ಬೆಳಗಾವಿ: ವಿಜಯೇಂದ್ರ ನೀನು ಅಧ್ಯಕ್ಷ ಸ್ಥಾನಕ್ಕೆ ಯೋಗ್ಯನಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಿ ವೈ ವಿಜಯೇಂದ್ರ ವಿರುದ್ಧ ಗುಡುಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಮ್ಮ ಪಕ್ಷದಲ್ಲಿ ಜಗಳ ಇದೆ. ಅದು ಕೇವಲ ಅಧ್ಯಕ್ಷ ಸ್ಥಾನ ಬದಲಾವಣೆಗಾಗಿ ಮಾತ್ರ. ಅಧ್ಯಕ್ಷ ಸ್ಥಾನ ಬದಲಾವಣೆಗೆ ಆಗದಿದ್ದರೂ ಪಕ್ಷ ಸಂಘಟನೆ ಮಾಡುತ್ತೇವೆ. ನಿನ್ನನ್ನು ರಾಜ್ಯದಲ್ಲಿ ಓಡಾಡದ ಹಾಗೆ ಮಾಡುವ ಶಕ್ತಿ ನನಗಿದೆ ಎಂದರು.
ನಿನ್ನಂತ ಕೀಳು ಮಟ್ಟದ ರಾಜಕೀಯ ಮಾಡಲು ನನಗೆ ಬರಲ್ಲ. ವಿಜಯೇಂದ್ರ ಬಗ್ಗೆ ಗೌರವ ಇಲ್ಲ. ಅಧ್ಯಕ್ಷ ಸ್ಥಾನದ ಮೇಲೆ ಮಾತ್ರ ಗೌರವ ಇದೆ. ಅವರನ್ನ ಬದಲಿಸಿ ಹೊಸಬರಿಗೆ ಅವಕಾಶ ನೀಡಲಿ. ಯಡಿಯೂರಪ್ಪನವರೇ ಇನ್ನು ನೀವು ಸಿಎಂ ಆಗಲ್ಲ ಪದೇ ಪದೇ ಸೈಕಲ್ ಮೇಲೆ ಓಡಾಡಿದ್ದೀನಿ ಎಂದು ಹೇಳಬೇಡಿ ಎಂದು ಹೇಳಿದರು.
ಪಕ್ಷಕ್ಕೆ ಬಂದು ಮೂರು ವರ್ಷ ಆಯ್ತು ಅಂತೀಯಾ. ನಾನು ನಿಮ್ಮ ಅಪ್ಪನನ್ನು ಸಿಎಂ ಮಾಡಲು ಬಂದಿದ್ದೆ. ನೀನು ಅದೇ ಹರಾಮಿ ದುಡ್ಡಲ್ಲಿ ಓಡಾಡ್ತಿದ್ದಿಯಾ ಎಂದು ವಾಗ್ದಾಳಿ ನಡೆಸಿದರು.
