
ಬೆಳಗಾವಿ: ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ವಿರುದ್ಧ ಕೆಲವು ಸಚಿವರು ಅಸಮಾಧಾನಗೊಂಡಿರುವ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮಾಧ್ಯಮಗಳ ಬಗ್ಗೆಯೇ ಹರಿಹಾಯ್ದು, ಸುಳ್ಳು ಹೇಳಿ ವರ್ಚಸ್ಸಿಗೆ ಧಕ್ಕೆ ತರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಸುರ್ಜೇವಾಲ ಎಲ್ಲರನ್ನೂ ಒಂದೇ ರೀತಿ ನಡೆಸಿಕೊಳ್ಳುತ್ತಿಲ್ಲ. ಅವರ ಬಗ್ಗೆ ರಾಹುಲ್ ಗಾಂಧಿಯವರಿಗೆ ದೂರು ನೀಡಬೇಕು. ರಾಜ್ಯ ಉಸ್ತುವಾರಿಯಿಂದ ವಾಪಸ್ ಕರೆಸಿಕೊಳ್ಳುವಂತೆ ಒತ್ತಡ ಹೇರಬೇಕು’ ಎಂದು ಸಿಎಂ ಸಿದ್ದರಾಮಯ್ಯಗೆ ಕೆಲವು ಮಂದಿ ಸಚಿವರು ಆಗ್ರಹಿಸಿದ್ದಾರೆ ಎನ್ನಲಾಗಿತ್ತು.
ಸತೀಶ್ ಆಪ್ತರ ಮನವೊಲಿಕೆಗೆ ಡಿಕೆಶಿ ಮುಂದಾಗಿದ್ದಾರೆ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ,ಜಗಳ ಇತ್ತು ಅದಕ್ಕೆ ಹೋಗಿದ್ದರು ಎಂದು ನೀವು (ಮಾಧ್ಯಮದವರು) ಹೇಳುತ್ತಿದ್ದೀರಿ. ಫಿರೋಜ್ ಸೇಠ್ ಹಿರಿಯರು, ಅವರ ಜತೆ ಕೆಲಸ ಮಾಡಿದ್ದೇವೆ. ಸಂಘಟನೆ ದೃಷ್ಟಿಯಿಂದ ನಿವಾಸಕ್ಕೆ ಹೋಗಿ ಬಂದಿದ್ದೆ ಎಂದರು.
