Home ಸುದ್ದಿಗಳು ನಿರ್ಮಾಪಕ ದಿಲ್‌ ರಾಜು ಮನೆ, ಕಚೇರಿ ಮೇಲೆ ಐಟಿ ದಾಳಿ

ನಿರ್ಮಾಪಕ ದಿಲ್‌ ರಾಜು ಮನೆ, ಕಚೇರಿ ಮೇಲೆ ಐಟಿ ದಾಳಿ

0
ನಿರ್ಮಾಪಕ ದಿಲ್‌ ರಾಜು ಮನೆ, ಕಚೇರಿ ಮೇಲೆ ಐಟಿ ದಾಳಿ

ಹೈದರಾಬಾದ್‌: ಹಲವಾರು ಹಿಟ್‌ ಸಿನಿಮಾಗಳ ನಿರ್ಮಾಪಕ ದಿಲ್‌ ರಾಜು ಅವರಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಾಕ್‌ ಕೊಟ್ಟಿದ್ದಾರೆ.

ನಿರ್ಮಾಪಕ ದಿಲ್‌ ರಾಜು ಅವರ ಮನೆ, ಕಚೇರಿ ಸೇರಿದಂತೆ 8 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಒಟ್ಟು 55 ತಂಡಗಳು ಹೈದರಾಬಾದ್‌ನ ಜೂಬ್ಲಿಹಿಲ್ಸ್, ಬಂಜಾರಹಿಲ್ಸ್‌ನಲ್ಲಿರುವ ನಿವಾಸಗಳ ಮೇಲೆ, ದಿಲ್ ರಾಜು ಸಹೋದರ ಶಿರೀಷ್, ಪುತ್ರಿ ಹನ್ಸಿತ ರೆಡ್ಡಿ ಹಾಗೂ ಸಂಬಂಧಿಕರ ಮನೆಗಳ ಮೇಲೂ ಐಟಿ ದಾಳಿ ನಡೆಸಿದ್ದು, ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದೆ.

ಇತ್ತೀಚೆಗಷ್ಟೇ ನಟ ರಾಮ್‌ ಚರಣ್‌ ಅಭಿನಯದ ದೊಡ್ಡ ಬಜೆಟ್‌ ಸಿನಿಮಾ ʻಗೇಮ್ ಚೇಂಜರ್ʼ ನಿರ್ಮಿಸಿದ್ದರು. ಇದು ಬಾಕ್ಸ್‌ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಈ ನಡುವೆ ಐಟಿ ಅಧಿಕಾರಿಗಳು ನಿರ್ಮಾಪಕರಿಗೆ ಶಾಕ್ ನೀಡಿದ್ದಾರೆ.

 

LEAVE A REPLY

Please enter your comment!
Please enter your name here