Home ಸುದ್ದಿಗಳು ಯಲ್ಲಾಪುರದಲ್ಲಿ ತರಕಾರಿ ತುಂಬಿದ ಲಾರಿ ಪಲ್ಟಿ: 9 ಮಂದಿಯ ದುರ್ಮರಣ

ಯಲ್ಲಾಪುರದಲ್ಲಿ ತರಕಾರಿ ತುಂಬಿದ ಲಾರಿ ಪಲ್ಟಿ: 9 ಮಂದಿಯ ದುರ್ಮರಣ

0
ಯಲ್ಲಾಪುರದಲ್ಲಿ ತರಕಾರಿ ತುಂಬಿದ ಲಾರಿ ಪಲ್ಟಿ: 9 ಮಂದಿಯ ದುರ್ಮರಣ

ಕಾರವಾರ: ತರಕಾರಿ ತುಂಬಿದ ಲಾರಿ ಪಲ್ಟಿಯಾಗಿ 9 ಮಂದಿ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ನಡೆದಿದೆ.

ಯಲ್ಲಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಗುಳ್ಳಾಪುರ ಘಟ್ಟ ಭಾಗದಲ್ಲಿ ತಡರಾತ್ರಿ ಘಟನೆ ನಡೆದಿದ್ದು, ಮೃತರು ಹಾವೇರಿ ಜಿಲ್ಲೆಯ ಸವಣೂರಿನವರು ಎನ್ನಲಾಗಿದೆ.

ತರಕಾರಿ ತುಂಬಿದ್ದ ಹಾವೇರಿಯಿಂದ ಅಂಕೋಲದ ಕಡೆ ಹೊರಟಿತ್ತು, ಲಾರಿಯಲ್ಲಿ 30 ಮಂದಿ ಕುಳಿತಿದ್ದರು. ವೇಗವಾಗಿ ಬರುತ್ತಿದ್ದ ವೇಳೆ ಲಾರಿ ಪಲ್ಟಿಯಾಗಿ ದುರಂತ ಸಂಭವಿಸಿದೆ.

ಈ ಘಟನೆಯಲ್ಲಿ 9 ಮಂದಿ ಸಾವನ್ನಪ್ಪಿದ್ದು, ಸುಮಾರು 17 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಯಲ್ಲಾಪುರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

 

LEAVE A REPLY

Please enter your comment!
Please enter your name here