
ಸುಳ್ಯ: ಪಾನ್ ಬೀಡ ಅಂಗಡಿಯಲ್ಲಿ ಜನರಿಂದ ಹಣವನ್ನು ಪಣವಾಗಿರಿಸಿಕೊಂಡು ಮಟ್ಕಾ ಜೂಜಾಟ ನಡೆಸುತ್ತಿದ್ದ ವ್ಯಕ್ತಿಯೋರ್ವನನ್ನು ಸುಳ್ಯ ಪೊಲೀಸರು ದಾಳಿ ಮಾಡಿದ್ದಾರೆ.
ಸುಳ್ಯದ ನಿವಾಸಿ ಮಹಮ್ಮದ್ ಮುಸ್ತಕ್ ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ.
ಸುಳ್ಯ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕನಾದ ಸಂತೋಷ್ ಬಿ ಪಿ ರವರಿಗೆ ದೊರೆತ ಮಾಹಿತಿಗನುಸಾರವಾಗಿ ದಾಳಿ ನಡೆಸಿ ಪಾನ್ ಬೀಡ ಅಂಗಡಿಯಲ್ಲಿದ್ದ ಮಹಮ್ಮದ್ ಮುಸ್ತಕ ನನ್ನು ಕೂಲಂಕೂಷವಾಗಿ ವಿಚಾರಿಸಿದ್ದಾರೆ.
ವಿಚಾರಣೆ ವೇಳೆ ತಾನು ಗಿರಾಕಿಗಳಿಂದ ಹಣವನ್ನು ಪಡೆದು ಮಟ್ಕಾ ಜೂಜಾಟ ನಡೆಸುತ್ತಿರುವ ಬಗ್ಗೆ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಬಳಿಕ ತಪಾಸಣೆ ನಡೆಸಿ, ಆರೋಪಿಯ ಬಳಿಯಿದ್ದ ಮಟ್ಕಾ ಜೂಜಾಟ ನಡೆಸಿ ಸಂಗ್ರಹಿಸಿದ ರೂ 1650/- ನಗದು, ಮಟ್ಕಾ ಆಡಲು ಬಳಸಿದ ಪುಸ್ತಕ-01 ಪುಸ್ತಕವನ್ನು ವಶಪಡಿಸಿಕೊಂಡು, ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
