Home ಸುದ್ದಿಗಳು ʻಕ್ವಾಡ್‌ʼ ವಿದೇಶಾಂಗ ಸಚಿವರ ಸಭೆಯಲ್ಲಿ ಸಚಿವ ಎಸ್.ಜೈಶಂಕರ್ ಭಾಗಿ

ʻಕ್ವಾಡ್‌ʼ ವಿದೇಶಾಂಗ ಸಚಿವರ ಸಭೆಯಲ್ಲಿ ಸಚಿವ ಎಸ್.ಜೈಶಂಕರ್ ಭಾಗಿ

0
ʻಕ್ವಾಡ್‌ʼ ವಿದೇಶಾಂಗ ಸಚಿವರ ಸಭೆಯಲ್ಲಿ ಸಚಿವ ಎಸ್.ಜೈಶಂಕರ್ ಭಾಗಿ

ವಾಷಿಂಗ್ಟನ್‌: ಡೊನಾಲ್ಡ್‌ ಟ್ರಂಪ್‌ ಪ್ರಮಾಣ ವಚನ ಸ್ವೀಕರಿಸಿದ ಒಂದು ದಿನದ ನಂತರ ವಾಷಿಂಗ್ಟನ್‌ ಡಿಸಿಯಲ್ಲಿ ನಡೆದ ʻಕ್ವಾಡ್‌ʼ ವಿದೇಶಾಂಗ ಸಚಿವರ ಸಭೆಯಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಭಾಗವಹಿಸಿದ್ದರು.

ಟ್ರಂಪ್ ಅಧಿಕಾರಕ್ಕೆ ಬಂದ ನಂತರ ನಡೆದ ಮೊದಲ ಕ್ವಾಡ್‌ ಸಭೆ ಇದಾಗಿದೆ.

ಟ್ರಂಪ್‌ ಆಡಳಿತದಲ್ಲಿ ಹೊಸದಾಗಿ ನೇಮಕಗೊಂಡ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕ್ ವಾಲ್ಟ್ ಅವರೊಂದಿಗೆ ಸಭೆ ನಡೆಸಿದರು.

ಭಾರತ, ಅಮೆರಿಕ. ಜಪಾನ್, ಆಸ್ಟ್ರೇಲಿಯಾ ವಿದೇಶಾಂಗ ಸಚಿವರೊಂದಿಗೆ ಕ್ವಾಡ್‌ ಸಭೆ ಆಯೋಜಿಸಿದ್ದಕ್ಕಾಗಿ ರೂಬಿಯೊ ಅವರಿಗೆ ಧನ್ಯವಾದ ತಿಳಿಸಿದರು.

ಕ್ವಾಡ್ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಗುರಿ ಹೊಂದಿರುವ ನಾಲ್ಕು ದೇಶಗಳ ಗುಂಪು ಇದಾಗಿದೆ.

 

LEAVE A REPLY

Please enter your comment!
Please enter your name here