Home ಸಿನೆಮಾ ಅದ್ದೂರಿಯಾಗಿ ನೆರವೇರಿದ ಆದಿ ಪುರುಷ್‌ ಮೆಗಾ ಪ್ರೀ ರಿಲೀಸ್‌ ಇವೆಂಟ್‌

ಅದ್ದೂರಿಯಾಗಿ ನೆರವೇರಿದ ಆದಿ ಪುರುಷ್‌ ಮೆಗಾ ಪ್ರೀ ರಿಲೀಸ್‌ ಇವೆಂಟ್‌

0
ಅದ್ದೂರಿಯಾಗಿ ನೆರವೇರಿದ ಆದಿ ಪುರುಷ್‌ ಮೆಗಾ ಪ್ರೀ ರಿಲೀಸ್‌ ಇವೆಂಟ್‌

ತಿರುಪತಿ: ನಟ ಪ್ರಭಾಸ್‌ ಅವರು ಬಾಹುಬಲಿಯ ನಂತರ ಆರಿಸಿಕೊಂಡ ಅತ್ಯಂತ ದೊಡ್ಡ ಪ್ರಾಜೆಕ್ಟ್ ಆದಿಪುರಷ್ ಎನ್ನುವ ಮೇಘ ಮೂವಿ. ಇದರಲ್ಲಿ ಪ್ರಭಾಸ್ ರಾಮನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಮಂಗಳವಾರ ಸಿನಿಮಾದ ಮೆಗಾ ಪ್ರೀ ರಿಲೀಸ್‌ ಇವೆಂಟ್‌ ಅದ್ದೂರಿಯಾಗಿ ನೆರವೇರಿದ್ದು, ಇದಕ್ಕಾಗಿ ಭಾರತೀಯ ಸಿನಿಮಾ ಇತಿಹಾಸದಲ್ಲೇ ಅತಿದೊಡ್ಡ ಅಯೋಧ್ಯೆ ಸೆಟ್‌ ಅನ್ನು ಮರುನಿರ್ಮಾಣ ಮಾಡಿ ಬೃಹತ್‌ ವೇದಿಕೆಯನ್ನು ಚಿತ್ರತಂಡ ನಿರ್ಮಾಣ ಮಾಡಿತ್ತು. ಈ ಕಾರ್ಯಕ್ರಮಕ್ಕಾಗಿ ಚಿತ್ರತಂಡ ಕೋಟಿಗಟ್ಟಲೆ ಖಚು ಮಾಡಿದೆ ಎನ್ನಲಾಗಿದೆ.
ಇನ್ನು, ಈ ಮೂವಿಯಲ್ಲಿ ಶ್ರೀರಾಮನಾಗಿ ಪ್ರಭಾಸ್ ಕಾಣಿಸಿಕೊಂಡರೆ ಕೃತಿ ಸೇನಾ ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಒಂದು ಪೌರಾಣಿಕ ಮೂವಿಯಾಗಿದ್ದು ಇದನ್ನು ಹಿಂದಿ ಮತ್ತು ತೆಲುಗಿನಲ್ಲಿ ನಿರ್ಮಿಸಲಾಗುತ್ತಿದೆ. 500 ಕೋಟಿ ವೆಚ್ಚದಲ್ಲಿ ಚಿತ್ರವನ್ನು ನಿಮಿಸಲಾಗುತ್ತಿದೆ. ಜೂನ್‌ 16ರಂದು ತೆರೆಕಾಣಲಿರುವ ಈ ಚಿತ್ರವನ್ನು ಓಂ ರಾವತ್ ಅವರು ನಿರ್ದೇಶಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಈ ಚಿತ್ರವು 3ಡಿಯ ಮೂಲಕ ತೆರೆಗೆ ಅಪ್ಪಳಿಸಿ ಪ್ರೇಕ್ಷಕರನ್ನು ರಂಜಿಸಲಿದೆ.

 

LEAVE A REPLY

Please enter your comment!
Please enter your name here