Home ಸುದ್ದಿಗಳು ವಿಟ್ಲ: ಶ್ರೀಪಂಚಲಿಂಗೇಶ್ವರ ದೇವಸ್ಥಾನದ ರಥೋತ್ಸವದ ವೇಳೆ ದೇವರ ಪ್ರಭಾವಳಿಗೆ ಬಡಿದ ಡ್ರೋನ್

ವಿಟ್ಲ: ಶ್ರೀಪಂಚಲಿಂಗೇಶ್ವರ ದೇವಸ್ಥಾನದ ರಥೋತ್ಸವದ ವೇಳೆ ದೇವರ ಪ್ರಭಾವಳಿಗೆ ಬಡಿದ ಡ್ರೋನ್

0
ವಿಟ್ಲ: ಶ್ರೀಪಂಚಲಿಂಗೇಶ್ವರ ದೇವಸ್ಥಾನದ ರಥೋತ್ಸವದ ವೇಳೆ ದೇವರ ಪ್ರಭಾವಳಿಗೆ ಬಡಿದ ಡ್ರೋನ್

ವಿಟ್ಲ: ಶ್ರೀಪಂಚಲಿಂಗೇಶ್ವರ ದೇವಸ್ಥಾನದ ರಥೋತ್ಸವದ ವೇಳೆ ಡ್ರೋನ್ ನಿಯಂತ್ರಣ ತಪ್ಪಿ ದೇವರ ಪ್ರಭಾವಳಿಗೆ ಬಡಿದ ಘಟನೆ ನಡೆದಿದೆ.

ರಥದಲ್ಲಿ ಏರುವ ಹೊತ್ತಿಗೆ ದೇವರ ಉತ್ಸವ ಮೂರ್ತಿಗೆ ಡ್ರೋನ್ ಬಡಿದಿದೆ.‌ ಬಳಿಕ ರಥದ ಮೇಲಿದ್ದ ಸಹಾಯಕ ಅರ್ಚಕರ ತಲೆಗೆ ಬಡಿದು ಬಿದ್ದಿದೆ.

ಈ ಘಟನೆಯಿಂದ ದೇವರ ಮೂರ್ತಿ ಹೊತ್ತಿದ್ದ ಅರ್ಚಕರು ತಬ್ಬಿಬ್ಬಾಗಿದ್ದು, ಅವರು ಕೊಂಚ ನಿಯಂತ್ರಣ ತಪ್ಪಿದ್ದರೂ ಉತ್ಸವ ಮೂರ್ತಿ ಸಹಿತ ಅವರೂ ಕೆಳಕ್ಕೆ ಬೀಳುತ್ತಿದ್ದರು. ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ.

ತಕ್ಷಣ ಸಹ ಅರ್ಚಕರು ಡ್ರೋನ್ ಅನ್ನು ಒದ್ದು ಎಸೆದಿದ್ದಾರೆ.

 

LEAVE A REPLY

Please enter your comment!
Please enter your name here