Home ಸುದ್ದಿಗಳು ಮೈಕ್ರೋ ಫೈನಾನ್ಸ್‌ ಕಿರುಕುಳ ತಡೆಗೆ ಕಠಿಣ ಕಾನೂನು: ಗೃಹ ಸಚಿವ ಪರಮೇಶ್ವರ್

ಮೈಕ್ರೋ ಫೈನಾನ್ಸ್‌ ಕಿರುಕುಳ ತಡೆಗೆ ಕಠಿಣ ಕಾನೂನು: ಗೃಹ ಸಚಿವ ಪರಮೇಶ್ವರ್

0
ಮೈಕ್ರೋ ಫೈನಾನ್ಸ್‌ ಕಿರುಕುಳ ತಡೆಗೆ ಕಠಿಣ ಕಾನೂನು: ಗೃಹ ಸಚಿವ ಪರಮೇಶ್ವರ್

ಬೆಂಗಳೂರು: ಮೈಕ್ರೋ ಫೈನಾನ್ಸ್‌ನಿಂದ ತೊಂದರೆ ಆಗುತ್ತಿದೆ ಎಂದು ರಾಜ್ಯಾದ್ಯಂತ ದೂರು ದಾಖಲಾಗಿದೆ. ಈ ಕಿರುಕುಳ ತಡೆಗೆ ಕಠಿಣ ಕಾನೂನು ಜಾರಿ ಮಾಡುವುದಾಗಿ ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೈಕ್ರೋ ಫೈನಾನ್ಸ್ ಸಂಬಂಧ ಈಗ ಇರುವ ನಿಯಮಗಳು ಅಷ್ಟು ಕಠಿಣವಾಗಿ ಇಲ್ಲ ಎಂದು ನಮ್ಮ ಗಮನಕ್ಕೆ ಬಂದಿದೆ. ಸರ್ಕಾರ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಕಡಿವಾಣಕ್ಕೆ ಕಠಿಣ ಕಾನೂನು ತರುತ್ತದೆ ಅಂತ ತಿಳಿಸಿದರು.

ಬ್ಯಾಂಕ್ ನಿಯಮಗಳ ಪ್ರಕಾರ ಹಣ ರಿಕವರಿ ಮಾಡಲು ಕಾನೂನು ಇದೆ. ಅದೇ ರೀತಿ ಅವರ ರಕ್ಷಣೆ ಮಾಡಲು ಕಾನೂನು ಇದೆ. ಈಗ ಇರುವ ಕಾನೂನು ಸಾಕಾಗುತ್ತಿಲ್ಲ. ಕಠಿಣವಾಗಿ ಇಲ್ಲ ಅಂತ ನಮ್ಮ ಇಲಾಖೆಯಿಂದ ಅನೇಕ ವರದಿಗಳು ಬಂದಿವೆ. ಅದಕ್ಕಾಗಿ ಮುಂದಿನ ದಿನಗಳಲ್ಲಿ ಕಠಿಣ ಕಾನೂನು ಮಾಡೋ ಅಗತ್ಯವಿದೆ ಎಂದರು.

ಸಾಲ ತಗೊಂಡು ಸಾಲ ವಾಪಸ್ ಕಟ್ಟದೇ ಹೋದ್ರೆ ಅವರು ಸಾಲಗಾರರ ಬಳಿಯೇ ಕ್ರಮ ತೆಗೆದುಕೊಳ್ಳಬಹುದು ಅಂತ ಫೈನಾನ್ಸ್ ಅವರು ಸಹಿ ಹಾಕಿಸಿಕೊಂಡಿರುತ್ತಾರೆ. ಸಾಲ ತಗೋಳೋವಾಗ ಹತ್ತಾರು ಕಡೆ ಸಹಿ ತೆಗೆದುಕೊಂಡಿರುತ್ತಾರೆ. ಆ ಸಹಿ ಯಾಕೆ‌ ಮಾಡಿರುತ್ತೇವೆ ಅಂತಾನೂ ಗ್ರಾಹಕರಿಗೆ ಗೊತ್ತಿರೋದಿಲ್ಲ .ಅದು ಕಮಿಟ್ ಮೆಂಟ್ ಆಗಿರುತ್ತದೆ. ಆ ಆಧಾರದಲ್ಲಿ ಮನೆ ರೇಡ್ ಮಾಡೋದು, ಮನೆ ಸೀಜ್ ಮಾಡೋದು‌ ಎಲ್ಲಾ ಮಾಡ್ತಿದ್ದಾರೆ.ಇದಕ್ಕೆ ‌ಕಾನೂನಿನಲ್ಲೆ ಪರಿಹಾರ ಕಂಡುಹಿಡಿಯಬೇಕು ಎಂದರು.

 

LEAVE A REPLY

Please enter your comment!
Please enter your name here