Home ಸುದ್ದಿಗಳು ಗಣರಾಜ್ಯೋತ್ಸವದ ಹಿನ್ನಲೆ: ಒಂದು ಗಂಟೆ ಮುಂಚಿತವಾಗಿ ನಮ್ಮ ಮೆಟ್ರೋ ಸಂಚಾರ ಆರಂಭ

ಗಣರಾಜ್ಯೋತ್ಸವದ ಹಿನ್ನಲೆ: ಒಂದು ಗಂಟೆ ಮುಂಚಿತವಾಗಿ ನಮ್ಮ ಮೆಟ್ರೋ ಸಂಚಾರ ಆರಂಭ

0
ಗಣರಾಜ್ಯೋತ್ಸವದ ಹಿನ್ನಲೆ: ಒಂದು ಗಂಟೆ ಮುಂಚಿತವಾಗಿ ನಮ್ಮ ಮೆಟ್ರೋ ಸಂಚಾರ ಆರಂಭ

ಬೆಂಗಳೂರು: ನಾಳೆ ಗಣರಾಜ್ಯೋತ್ಸವದ ಹಿನ್ನಲೆ ಒಂದು ಗಂಟೆ ಮುಂಚಿತವಾಗಿ ನಮ್ಮ ಮೆಟ್ರೋ ಸಂಚಾರ ಆರಂಭವಾಗಲಿದೆ.

ಪ್ರತಿ ಶನಿವಾರ ಮತ್ತು ಭಾನುವಾರ ಬೆಳಗ್ಗೆ 7 ಗಂಟೆಗೆ ಮೆಟ್ರೋ ಸಂಚಾರ ಆರಂಭವಾಗುತ್ತಿತ್ತು. ಆದರೆ ನಾಳೆ ಗಣರಾಜ್ಯೋತ್ಸವದ ಹಿನ್ನಲೆ 6 ಗಂಟೆಗೆ ಆರಂಭವಾಗಲಿದೆ.

ಗಣರಾಜ್ಯೋತ್ಸವ ಅಂಗವಾಗಿ ನಡೆಯುತ್ತಿರುವ ಲಾಲ್‌ ಬಾಗ್‌ ಫಲಪುಷ್ಪ ಪ್ರದರ್ಶನ, ಬಿಐಇಸಿ ನಡೆಯುತ್ತಿರುವ ಕಾರ್ಯಕ್ರಮ, ಶಾಲೆ ಮತ್ತು ಕಾಲೇಜುಗಳಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ವಿದ್ಯಾರ್ಥಿಗಳು ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೆಷನ್‌ ಲಿಮಿಟೆಡ್‌(BMRCL) ಈ ಕ್ರಮವನ್ನು ಕೈಗೊಂಡಿದೆ.

ಲಾಲ್‌ಭಾಗ್‌ ಮೆಟ್ರೋ ನಿಲ್ದಾಣದಲ್ಲಿ ಬೆಳಗ್ಗೆ 10 ರಿಂದ ರಾತ್ರಿ 8 ರವರೆಗೆ ಪೇಪರ್ ಟಿಕೆಟ್ ಸಿಗಲಿದೆ. ಪೇಪರ್ ಟಿಕೆಟ್ ಮೂಲಕ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಬಹುದಾಗಿದೆ.

ಜೊತೆಗೆ ಪ್ರಯಾಣಿಕರಿಗೆ ಸಮಸ್ಯೆಯಾಗದಂತೆ 20 ಹೆಚ್ಚುವರಿ ಮೆಟ್ರೋ ರೈಲುಗಳನ್ನು ಓಡಿಸಲು ಮುಂದಾಗಿದೆ.

 

LEAVE A REPLY

Please enter your comment!
Please enter your name here