Home ಸುದ್ದಿಗಳು ರಘುಪತಿ ಭಟ್‌ ಅವರಿಗೆ ವಿಶ್ವವಾಣಿ ಗ್ಲೋಬಲ್‌ ಅಚೀವರ್ಸ್ ಅವಾರ್ಡ್

ರಘುಪತಿ ಭಟ್‌ ಅವರಿಗೆ ವಿಶ್ವವಾಣಿ ಗ್ಲೋಬಲ್‌ ಅಚೀವರ್ಸ್ ಅವಾರ್ಡ್

0
ರಘುಪತಿ ಭಟ್‌ ಅವರಿಗೆ ವಿಶ್ವವಾಣಿ ಗ್ಲೋಬಲ್‌ ಅಚೀವರ್ಸ್ ಅವಾರ್ಡ್

ಬೆಂಗಳೂರು: ವಿಶ್ವವಾಣಿ ಪತ್ರಿಕೆಯ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರತಿವರ್ಷ ‘ಗ್ಲೋಬಲ್ ಅಚೀವರ್ಸ್ ಅವಾರ್ಡ್’ ನೀಡಲಾಗುತ್ತಿದ್ದು ಈ ಬಾರಿ ಉಡುಪಿ ಮಾಜಿ ಶಾಸಕ ಕೆ. ರಘುಪತಿ ಭಟ್‌ ಅವರು ಆಯ್ಕೆಯಾಗಿದ್ದಾರೆ.

ಓಮನ್‌ ರಾಜಧಾನಿ ಮಸ್ಕತ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಘುಪತಿ ಭಟ್‌ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.

2004ರಲ್ಲಿ ಪ್ರಥಮ ಬಾರಿಗೆ ಉಡುಪಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ರಘುಪತಿ ಭಟ್‌ ಅವರು 2008 ಹಾಗೂ 2018 ಹೀಗೆ ಮೂರು ಅವಧಿಗೆ ಶಾಸಕರಾಗಿ ಕಾರ್ಯನಿರ್ವಹಿಸಿರುತ್ತಾರೆ. ಹಡಿಲು ಬಿದ್ದ ಗದ್ದೆಯಲ್ಲಿ ಕೃಷಿ ಕ್ರಾಂತಿ ಮಾಡಿರುವ ಭಟ್‌ ಅವರು ತುಳುನಾಡಿನ ಅಸ್ಮಿತೆಯಾದ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ವಿದ್ಯಾ ಕ್ಷೇತ್ರ, ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡಿರುವ ಭಟ್‌ ಅವರು ಸಾಮಾಜಿಕ ರಂಗದಲ್ಲೂ ತೊಡಗಿಸಿಕೊಂಡಿದ್ದಾರೆ.

 

LEAVE A REPLY

Please enter your comment!
Please enter your name here