Home ಸುದ್ದಿಗಳು ಮೈಕ್ರೋ ಫೈನಾನ್ಸ್ ಕಿರುಕುಳ ತಪ್ಪಿಸಲು ಡಿಸಿ-ಎಸ್ಪಿಗಳಿಗೆ ಕ್ರಮ ತೆಗೆದುಕೊಳ್ಳುವಂತೆ ಕೃಷ್ಣಬೈರೇಗೌಡ ಸೂಚನೆ

ಮೈಕ್ರೋ ಫೈನಾನ್ಸ್ ಕಿರುಕುಳ ತಪ್ಪಿಸಲು ಡಿಸಿ-ಎಸ್ಪಿಗಳಿಗೆ ಕ್ರಮ ತೆಗೆದುಕೊಳ್ಳುವಂತೆ ಕೃಷ್ಣಬೈರೇಗೌಡ ಸೂಚನೆ

0
ಮೈಕ್ರೋ ಫೈನಾನ್ಸ್ ಕಿರುಕುಳ ತಪ್ಪಿಸಲು ಡಿಸಿ-ಎಸ್ಪಿಗಳಿಗೆ ಕ್ರಮ ತೆಗೆದುಕೊಳ್ಳುವಂತೆ ಕೃಷ್ಣಬೈರೇಗೌಡ ಸೂಚನೆ

ಬೆಂಗಳೂರು: ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಜೊತೆ ಸಭೆ ಮಾಡಿ ಎಚ್ಚರಿಕೆ ಕೊಡಬೇಕು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಡಿಸಿ-ಎಸ್ಪಿಗಳಿಗೆ ಸೂಚನೆ ನೀಡಿದ್ದಾರೆ.

ಸಿಎಂ ಸೂಚನೆ ಮೇರೆಗೆ ಎಲ್ಲಾ ಡಿಸಿ ಹಾಗೂ ಎಸ್ಪಿಗಳ ಜೊತೆ ಸಚಿವರು ಸಭೆ ನಡೆಸಿ, ಮಾತನಾಡಿದ್ದಾರೆ. ಮೈಕ್ರೋ ಫೈನಾನ್ಸ್ ಕಿರುಕುಳ ತಪ್ಪಿಸಲು ಇನ್ನೊಂದು ವಾರದಲ್ಲಿ ಡಿಸಿ-ಎಸ್ಪಿಗಳಿಗೆ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು.

ಈ ವಾರದಲ್ಲಿ ಡಿಸಿ, ಎಸ್ಪಿಗಳು ಫೈನಾನ್ಸ್ ಸಂಸ್ಥೆಗಳ ಜೊತೆ ಅವರ ಜೊತೆ ಸಭೆ ಮಾಡಬೇಕು ಎಂದು ತಿಳಿಸಿದ್ದರು. ಆರ್‌ಬಿಐ ನಿಯಮಗಳನ್ನು ಉಲ್ಲಂಘನೆ ಮಾಡದಂತೆ ಎಚ್ಚರ ಕೊಡಬೇಕು ಎಂದರು.

ಅತಿರೇಕದ ಸಾಲ ಪಾವತಿ ಕ್ರಮ ತೆಗೆದುಕೊಂಡರೇ ಕೇಸ್ ದಾಖಲು ಮಾಡುವಂತೆ ಸೂಚನೆ ನೀಡಬೇಕು. ಫೈನಾನ್ಸ್ ಕಂಪನಿಗಳು ಯದ್ವಾತದ್ವಾ ಸಾಲ ಕೊಡುತ್ತಿದ್ದಾರೆ. 2 ಲಕ್ಷ ರೂ. ಮೇಲ್ಪಟ್ಟು ಸಾಲ ಕೊಡಬಾರದು. ಇದು ಆರ್‌ಬಿಐ ನಿಯಮ. ಬೇಜವಾಬ್ದಾರಿಯಾಗಿ ಸಾಲ ಕೊಡುವುದು ನಿಯಂತ್ರಣ ಮಾಡಬೇಕು ಎಂದು ಸೂಚನೆ ನೀಡಿದ್ದೇವೆ ಎಂದರು.

 

LEAVE A REPLY

Please enter your comment!
Please enter your name here