
ಭೋಪಾಲ್: ಮಧ್ಯಪ್ರದೇಶದ ಹರ್ಪಾಲ್‌ಪುರ ರೈಲ್ವೆ ನಿಲ್ದಾಣದಲ್ಲಿ ಮಹಾಕುಂಭ ಮೇಳದ ವಿಶೇಷ ರೈಲಿಗೆ ಪ್ರಯಾಣಿಕರು ಕಲ್ಲು ಎಸೆದಿರುವ ಘಟನೆ ನಡೆದಿದೆ.
ಮಹಾ ಕುಂಭಮೇಳಕ್ಕೆ ಹೋಗುತ್ತಿದ್ದ ವಿಶೇಷ ರೈಲು ಝಾನ್ಸಿ ರೈಲ್ವೆ ನಿಲ್ದಾಣದಿಂದ ರಾತ್ರಿ 8 ಗಂಟೆಗೆ ಹೊರಟಿತ್ತು. ಹರ್ಪಾಲ್‌ಪುರ ನಿಲ್ದಾಣಕ್ಕೆ ಬರುತ್ತಿದ್ದಂತೆ ರೈಲಿನ ಬಾಗಿಲು ಹಾಕಿದ್ದರಿಂದ ಪ್ರಯಾಣಿಕರಿಗೆ ಹತ್ತಲು ಸಾಧ್ಯವಾಗಿರಲಿಲ್ಲ. ಇದರಿಂದ ಕೋಪಗೊಂಡ ಪ್ರಯಾಣಿಕರು ಬೋಗಿಗಳ ಮೇಲೆ ಹಾಗೂ ಬಾಗಿಲು, ಕಿಟಕಿಗಳ ಮೇಲೂ ಕಲ್ಲು ಎಸೆದಿದ್ದಾರೆ. ಇದರಿಂದ ರೈಲಿನೊಳಗಿದ್ದ ಪ್ರಯಾಣಿಕರು ಭಯಭೀತರಾಗಿ ಕಿರುಚಾಡಿದ್ದಾರೆ.
ನಸುಕಿನ ಜಾವ 2 ಗಂಟೆಗೆ ರೈಲು ಹರ್ಪಾಲ್ ಪುರ ರೈಲ್ವೇ ನಿಲ್ದಾಣಕ್ಕೆ ತಲುಪುತ್ತಿದ್ದಂತೆ ಜನರು ರೈಲಿನ ಮೇಲೆ ಕಲ್ಲು ಎಸೆದಿದ್ದಾರೆ ಎಂದು ಹರ್ಪಾಲ್ ಪುರ ಪೊಲೀಸ್ ಠಾಣೆಯ ಉಸ್ತುವಾರಿ ಪುಷ್ಪಕ್ ಶರ್ಮ ತಿಳಿಸಿದ್ದಾರೆ.
ಪ್ರಯಾಣಿಕರು ರೈಲಿಗೆ ಕಲ್ಲು ಎಸೆದಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ (Social Media) ಭಾರೀ ಹರಿದಾಡುತ್ತಿದೆ.
झांसी से प्रयागराज महाकुंभ जा रही एक स्पेशल ट्रेन 11801 पर हरपालपुर स्टेशन पर उपद्रवियों ने किया पथराव… डर से यात्रियों में मची चीख-पुकार…वीडियो सोशल मीडिया पर हुआ वायरल… #MahakumbhTrainAttacked #MahaKumbh2025 #Mahakumbh #MahakumbhTrain #ViralVideo pic.twitter.com/YmLoyBIn7W
— Zee Business (@ZeeBusiness) January 28, 2025
